ತುಳುನಾಡಿನ ಸಂಸ್ಕೃತಿ ಉಳಿವಿಗೆ ಸಂಘಟಿತ ಹೋರಾಟ ಅಗತ್ಯ: ಫ್ರಾಂಕಿ ಡಿಸೋಜಾ
ಬ್ರಹ್ಮಾವರ : ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿ, ಭಾಷೆ ಹಾಗೂ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಸಂಘಟಿತ ಹೋರಾಟ ಮತ್ತು ಜನಜಾಗೃತಿ ಅತ್ಯಗತ್ಯ ಎಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜಾ ಹೇಳಿದರು.
ಅವರು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ, ಬ್ರಹ್ಮಾವರ ಘಟಕದ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೂರಿನ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಸಮೀಪದ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಉದ್ದೇಶಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಅವರು ತುಳುನಾಡಿನ ಇತಿಹಾಸ, ಸಂಸ್ಕೃತಿ, ಸಂಪ್ರದಾಯ, ಭಾಷೆಯ ಮಹತ್ವ ಹಾಗೂ ಸಂಘಟನೆಯ ಹೋರಾಟದ ಹಿನ್ನೆಲೆ ಮತ್ತು ಕಾರ್ಯಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೂರ್ಯ-ಚಂದ್ರರ ಶಾಲು ಹೊದಿಸಿ ನೂತನ ಪದಾಧಿಕಾರಿಗಳನ್ನು ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಾವರ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪ್ರದೀಪ್ (ದೀಪು ಅಣ್ಣ) ಚಾಂತಾರ್, ಅಧ್ಯಕ್ಷರಾಗಿ ಶರತ್ ರಾಜ್ ಆರೂರು, ಪ್ರಧಾನ ಕಾರ್ಯದರ್ಶಿಯಾಗಿ ಮಹೇಂದ್ರ ಆಚಾರ್ಯ ಹೆರಂಜೆ, ಉಪಾಧ್ಯಕ್ಷರಾಗಿ ನಿತಿನ್ ಶೆಟ್ಟಿ ಪೇತ್ರಿ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯ ನಾಯ್ಕ್ ಆರೂರು ಹಾಗೂ ಕೋಶಾಧಿಕಾರಿಯಾಗಿ ವಿಘ್ನೇಶ್ ನಾಯ್ಕ್ ಆರೂರು ಆಯ್ಕೆಯಾದರು.
ಸಭೆಯಲ್ಲಿ ವಿಜಯ್ ಆರೂರು, ರವಿ ಆರೂರು, ರಾಕೇಶ್, ಸತ್ಯನಾರಾಯಣ ಹೇರೂರು, ಉಮೇಶ್ ಬಿರ್ತಿ, ಅಜಿತ್ ಕರ್ಜೆ, ವೈಶಾಲ್ ಬ್ರಹ್ಮಾವರ, ಶಶಾಂಕ್ ಹೇರೂರು, ಸುಶಾಂತ್ ಕೊಳಂಬೆ, ರಮೇಶ್, ಸಾಹಿರಾಜ್ ಶೆಟ್ಟಿ, ಪ್ರಕಾಶ್ ಹೇರೂರು, ಕೀರ್ತಿರಾಜ್ ಬ್ರಹ್ಮಾವರ, ಗೋಪಾಲ್ ನಾಯ್ಕ್ ಆರೂರು ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು.
ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದರ ಜೊತೆಗೆ ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆಗೆ ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪದೊಂದಿಗೆ ಸಭೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

