ಮೂಡುಬಿದಿರೆಯಲ್ಲಿ ನೂತನ ‘OiA-ಫ್ಯಾಮಿಲಿ ಸಲೂನ್’ ಶಾಖೆ ಶುಭಾರಂಭ

0
322

ಮೂಡುಬಿದಿರೆ : ಅಂತರಾಷ್ಟ್ರೀಯ ಗುಣಮಟ್ಟದ ‘OiA -ಫ್ಯಾಮಿಲಿ ಸಲೂನ್’ (OiA The Family Salon) ನೂತನ ಶಾಖೆಯು ಜನವರಿ 14 ರಂದು ಮೂಡುಬಿದಿರೆಯಲ್ಲಿ ಶುಭಾರಂಭಗೊಂಡಿತು. ಮಂಗಳೂರು ಮತ್ತು ಕಾರ್ಕಳದಲ್ಲಿ ಈಗಾಗಲೇ ತನ್ನ ವಿಶಿಷ್ಟ ಸೇವೆಯ ಮೂಲಕ ಜನಪ್ರಿಯತೆ ಗಳಿಸಿರುವ ‘OiA’,  ಮೂಡುಬಿದಿರೆಯಲ್ಲೂ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ.

ಮೂಡುಬಿದಿರೆಯ ಪುರಸಭೆ ಕಚೇರಿ ಎದುರಿನ ‘ಫಾರ್ಚೂನ್ ನೀತಿ ಹೈಟ್ಸ್’ ಕಟ್ಟಡದ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಂಡು ಸಲೂನ್ ಕಾರ್ಯಾರಂಭಗೊಂಡಿದ್ದು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ‘OiA -ಫ್ಯಾಮಿಲಿ ಸಲೂನ್’ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ ಮತ್ತು ಜಯಶ್ರೀ ಅಮರನಾಥ ಶೆಟ್ಟಿ , ಪುರಸಭೆ ಮಾಜಿ ಅಧ್ಯಕ್ಷೆ ಜಯಶ್ರೀ ಕೇಶವ್, ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್, ಕೆಎಂಎಫ್ ಉಪಾಧ್ಯಕ್ಷ ಉದಯ ಕೋಟ್ಯಾನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸಂಸ್ಥೆಯ ಮಾಲಕರಾದ ಬಾಸ್ಕೋ ಡಿಸೋಜ, ಪಾಲುದಾರ ಪ್ರಜ್ವಲ್ ಹಾಗೂ ಅವರ ಕುಟುಂಬಸ್ಥರು ಅತಿಥಿಗಳನ್ನು ಸ್ವಾಗತಿಸಿದರು.

ಈ ನೂತನ ಶಾಖೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಅನ್ವಯವಾಗುವಂತೆ- ಕೇಶ ವಿನ್ಯಾಸ , ಅಂತರಾಷ್ಟ್ರೀಯ ಮಟ್ಟದ ಹೇರ್ ಕಟ್ ಮತ್ತು ಸ್ಟೈಲಿಂಗ್, ತ್ವಚೆ ಆರೈಕೆ ಅತ್ಯಾಧುನಿಕ ಫೇಶಿಯಲ್ ಮತ್ತು ಸ್ಕಿನ್ ಟ್ರೀಟ್ಮೆಂಟ್ , ನಖಾಲಂಕಾರ ನೈಲ್ ಆರ್ಟ್ ಮತ್ತು ಪೆಡಿಕ್ಯೂರ್-ಮೆನಿಕ್ಯೂರ್ ಸೇವೆಗಳು, ವಧುವಿನ ಅಲಂಕಾರ ಸೇರಿದಂತೆ ಎಲ್ಲಾ ಶುಭ ಸಮಾರಂಭಗಳಿಗೆ ವೃತ್ತಿಪರ ಮೇಕಪ್ ಸೌಲಭ್ಯಗಳು ಲಭ್ಯವಿವೆ.

LEAVE A REPLY

Please enter your comment!
Please enter your name here