ಬೆಂಗಳೂರು : ರಾಜ್ಯದಲ್ಲಿ ಚಾಣಕ್ಯ ಬಂದ ವೇಳೆ ಅಪಘಾತ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚಾರಣಕ್ಕೆ ತೆರಳುವವರಿಗೆ ಇದೀಗ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಮಾರ್ಗಸೂರ್ಚಿಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇದೀಗ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಚಾರಣಕ್ಕೆ ಹೋಗುವವರಿಗೆ ಎಸ್‌ಓಪಿ ಕಡ್ಡಾಯಗೊಳಿಸಲಾಗಿದೆ.
ಸೆವೆನ್ ಮಿನಿಸ್ಟರ್ ಕ್ವಾಟರ್ಸ್ನಲ್ಲಿ ಸಚಿವ ಈಶ್ವರ ಖಂಡ್ರೆ ಎಸ್‌ಓಪಿ ಅನ್ನು ಬಿಡುಗಡೆ ಮಾಡಿದರು. ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಂಗಳೂರಲ್ಲಿ ಚರಣಕ್ಕೆ ಬಂದು ಓರ್ವ ಬಾಲಕಿ ಸಾವನ್ನುಪ್ಪಿದ್ದಳು. ಘಟನೆಗಳು ಪುನರಾವರ್ತನೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಎಸ್‌ಓಪಿ ಜಾರಿಗೊಳಿಸಲಾಗಿದೆ.
ರಾಜ್ಯದಲ್ಲಿ ಚಾಣಕ್ಯ ತೆರಳುವವರಿಗೆ ಎಸ್‌ಓಪಿ ಬಿಡುಗಡೆ ಮಾಡಿದ ಬಳಿಕ ಸಚಿವ ಈಶ್ವರ ಖಂಡ್ರೆ ಮಾತನಾಡಿ, ರಾಜ್ಯದಲ್ಲಿ 44 ಚಾರಣ ಪಾಯಿಂಟ್ ಗಳು ಚಾಲ್ತಿಯಲ್ಲಿವೆ. ಕಡ್ಡಾಯವಾಗಿ ಎಸ್‌ಓಪಿ ಜಾರಿಗೆ ತರಲು ಸೂಚನೆ ನೀಡಿದ್ದೇವೆ. ಚಾಲನೆಗಳ ಮೊಬೈಲ್ ಗೆ ಟ್ರ್ಯಾಕಿಂಗ್ ಆಪ್ ಅಳವಡಿಕೆ ಮಾಡುತ್ತೇವೆ. 10 ಚಾರಣಿಗರಿಗೆ ಒಬ್ಬ ಗೈಡ್ ಇರಲೇಬೇಕು. ಚಾರಣಕ್ಕೆ ಹೋಗುವವರು ಆನ್ಲೈನ್ ನಲ್ಲಿ ಬುಕಿಂಗ್ ಮಾಡಬೇಕು. 10 ಮಂದಿಗೆ ಒಬ್ಬ ಗೈಡ್ ಕೊಟ್ಟ ಬಳಿಕವೇ ಚರಣಕ್ಕೆ ಅವಕಾಶ ನೀಡಲಾಗುತ್ತದೆ. ಒಮ್ಮೆ 150 ಮಂದಿ ಮಾತ್ರ ಚಾರಣಕ್ಕೆ ಹೋಗಬೇಕು. 150 ಮಂದಿಯ ತಂಡ ವಾಪಸ್ ಬಳಿಕ ಮತ್ತೊಂದು ತಂಡ ಚಾರಣಕ್ಕೆ ಕಳುಹಿಸಬೇಕು. ಕಟ್ಟುನಟ್ಟಾಗಿ ಎಸ್‌ಓಪಿ ಜಾರಿಗೆ ತರಲಾಗುತ್ತಿದೆ ಎಂದು ಎಸ್‌ಓಪಿ ಬಿಡುಗಡೆಗೊಳಿಸಿ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದರು.
ರಿಯಲ್ ಟೈಮ್ ಟ್ರ್ಯಾಕಿಂಗ್ ಆಯಪ್: ಚಾರಣಿಗರ ಚಲನವಲನವನ್ನು ಪತ್ತೆಹಚ್ಚಲು ವಿಶೇಷ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗುತ್ತಿದೆ. ಚಾರಣಕ್ಕೆ ತೆರಳುವವರು ಈ ಆಯಪ್ ಅನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇದು ಕಾಡಿನೊಳಗೆ ದಾರಿ ತಪ್ಪಿದಲ್ಲಿ ಅವರನ್ನು ಹುಡುಕಲು ನೆರವಾಗಲಿದೆ.
ಕಡ್ಡಾಯ ವಿಮೆ (Mandatory Insurance): ಚಾರಣದ ಸಮಯದಲ್ಲಿ ಸಂಭವಿಸಬಹುದಾದ ಅಪಘಾತ ಅಥವಾ ತುರ್ತು ಪರಿಸ್ಥಿತಿಗಳಿಗಾಗಿ ಚಾರಣಿಗರಿಗೆ ಗುಂಪು ವಿಮೆಯನ್ನು ಕಡ್ಡಾಯಗೊಳಿಸಲಾಗಿದೆ.
ವೈರ್‌ಲೆಸ್ ಉಪಕರಣಗಳ ಬಳಕೆ: ಚಾರಣದ ಮಾರ್ಗದರ್ಶಕರು (Nature Guides) ಇನ್ಮುಂದೆ ವೈರ್‌ಲೆಸ್ ಸಂವಹನ ಸಾಧನಗಳನ್ನು ಹೊಂದಿರಬೇಕು ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.
ಯಾವುದೇ ತಂಡದ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿಯನ್ನು ಆ ತಂಡದ ಲೀಡರ್ ಅಥವಾ ಮಾರ್ಗದರ್ಶಕರ ಮೇಲೆ ಹೊರಿಸಲಾಗುವುದು.
ಕೊಡಗಿನ ತಡಿಯಂಡಮೋಲ್ ಮತ್ತು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಇತ್ತೀಚೆಗೆ ಚಾರಣಿಗರು ದಾರಿ ತಪ್ಪಿ ನಾಪತ್ತೆಯಾಗಿದ್ದ ಘಟನೆಗಳಿಂದ ಎಚ್ಚೆತ್ತುಕೊಂಡ ಸರ್ಕಾರ ಈ ಕ್ರಮ ಕೈಗೊಂಡಿದೆ.

