ಎಲ್‌ಪಿಜಿ ಗ್ಯಾಸ್ ಬುಕ್ಕಿಂಗ್‌ನಲ್ಲಿ ಹೊಸ ರೂಲ್ಸ್‌ !

0
258

ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಹೊಸ ರೂ‌ಲ್ಸ್ ಗಳನ್ನು ಅಳವಡಿಸಿಕೊಳ್ಳಲಾಗಿದೆ. ಹೊಸ LPG ಬುಕಿಂಗ್ ನಿಯಮ ಹಾಗೂ ನಿಮ್ಮ ಮಾಸಿಕ ಸಿಲಿಂಡರ್ ಮಿತಿಯ ವಿವರವನ್ನು ಈ ಲೇಖನದಲ್ಲಿ ಕೊಡಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ಸಿಲಿಂಡರ್ ಪೂರೈಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ.

ಹೀಗಾಗಿ, ಕೇಂದ್ರ ಸರ್ಕಾರವು ಕೆಲವೊಂದು ಹೊಸ ನಿಯಮಗಳನ್ನು ಜಾರಿ ಮಾಡಿದೆ. LPG ಬಳಸುವ ಪ್ರತಿಯೊಬ್ಬ ಗ್ರಾಹಕರು ಈ ನಿಯಮಗಳ ಬಗ್ಗೆ ತಿಳಿದಿರಬೇಕು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನಿಗದಿಪಡಿಸಿದ ಹೊಸ ನಿಯಮಗಳ ಪ್ರಕಾರ, ಗ್ರಾಹಕರು ತಿಂಗಳಿಗೆ ಗರಿಷ್ಠ ಎರಡು ಸಿಲಿಂಡರ್‌ಗಳನ್ನು ಬುಕ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.

ಗ್ರಾಹಕರು ಈಗ ನಿಗದಿ ಮಾಡಿರುವ ಮಿತಿಗಿಂತ ಹೆಚ್ಚಿನ ಸಿಲಿಂಡರ್‌ಗಳನ್ನು ಬುಕ್ ಮಾಡುವುದಕ್ಕೆ ಪ್ರಯತ್ನಿಸಿದರೆ ವ್ಯವಸ್ಥೆಯು ಬುಕಿಂಗ್ ಅನ್ನು ನಿರ್ಬಂಧಿಸಬಹುದು ಅಥವಾ ಹೆಚ್ಚುವರಿ ಪರಿಶೀಲನಾ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಸರ್ಕಾರವು ಪ್ರತಿ ಹಣಕಾಸು ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಒದಗಿಸುತ್ತದೆ (ಏಪ್ರಿಲ್ 1 ರಿಂದ ಮಾರ್ಚ್ 31). ಈ ನಿರ್ದಿಷ್ಟ ನಿಗದಿಗಿಂತ ಹೆಚ್ಚಿನ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದಕ್ಕೆ ನೀವು ಬಯಸಿದರೆ, ನೀವು ಮೂರು ಹೆಚ್ಚುವರಿ ಸಬ್ಸಿಡಿ ರಹಿತ ಸಿಲಿಂಡರ್‌ಗಳನ್ನು ಖರೀದಿಸಬಹುದು. ಪರಿಣಾಮವಾಗಿ, ಒಂದು ವರ್ಷದೊಳಗೆ ಒಂದೇ ಎಲ್‌ಪಿಜಿ ಸಂಪರ್ಕದಲ್ಲಿ ಗರಿಷ್ಠ 15 ಸಿಲಿಂಡರ್‌ಗಳನ್ನು ಬುಕ್ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ.

ಹೊಸ ನಿಯಮಗಳಲ್ಲಿ ಕೇಂದ್ರ ಸರ್ಕಾರವು ಹೆಚ್ಚುವರಿ ನಿಬಂಧನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಹಿಂದಿನ ನಿಯಮಕ್ಕೆ ಬದಲಾಗಿ, ನಿಖರವಾಗಿ 21 ದಿನಗಳ ನಂತರ ಎರಡನೇ ಸಿಲಿಂಡರ್ ಅನ್ನು ಬುಕ್ ಮಾಡಬಹುದು; ಆದಾಗ್ಯೂ, ಈ ಕಾಯುವ ಅವಧಿಯನ್ನು ಈಗ 25 ದಿನಗಳವರೆಗೆ ವಿಸ್ತರಿಸಲಾಗಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹೆಚ್ಚುವರಿ ಸಿಲಿಂಡರ್‌ಗಳನ್ನು ಬುಕ್ ಮಾಡಲು ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ನೀವು ಈಗಾಗಲೇ ನಿಮ್ಮ ವಾರ್ಷಿಕ 12 ಸಿಲಿಂಡರ್‌ಗಳ ಕೋಟಾವನ್ನು ಖಾಲಿ ಮಾಡಿದ್ದರೂ ಇನ್ನೂ ಹೆಚ್ಚಿನದನ್ನು ಬುಕ್ ಮಾಡಲು ಬಯಸಿದರೆ, ನೀವು ಕೆಲವು ಅಗತ್ಯ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಹಾಗೆ ಮಾಡಲು, ನೀವು ‘ಹಲೋ BPCL’ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬೇಕು.

ಅಪ್ಲಿಕೇಶನ್‌ನಲ್ಲಿ ನಿಮಗೆ ಕೇಳುವ ಪ್ರಮುಖ ಪ್ರಶ್ನೆಗಳು

_ನಿಮ್ಮ ಮನೆಯಲ್ಲಿ ಮದುವೆ ಅಥವಾ ವಿಶೇಷ ಕಾರ್ಯಕ್ರಮದಂತಹ ಕುಟುಂಬ ಕಾರ್ಯಕ್ರಮ ನಡೆಯುತ್ತಿದೆಯೇ ?

-ಅತಿಥಿಗಳ ಅಂದಾಜು ಸಂಖ್ಯೆ ಎಷ್ಟು?

-ಈ ಪ್ರಶ್ನೆಗಳಿಗೆ ನಿಮ್ಮ ಪ್ರತಿಕ್ರಿಯೆಗಳ ಆಧಾರದ ಮೇಲೆ, ಹೆಚ್ಚುವರಿ ಸಿಲಿಂಡರ್‌ಗಳನ್ನು ಪಡೆಯಲು ನಿಮ್ಮ ಅರ್ಹತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

LEAVE A REPLY

Please enter your comment!
Please enter your name here