ನಿಟ್ಟೆ ಜವಳಿ ಪಾರ್ಕ್ – ವೈಯಕ್ತಿಕ ಪ್ರತಿಷ್ಠೆ ಸಲ್ಲದು

0
109

ಒಬ್ಬ ಅತಿ ಬಡ ಕುಟುಂಬಕ್ಕೆ ಅಧಿಕಾರಿಗಳು ಮಾನವೀಯತೆ ತೋರಿದರೆ “ನನ್ನ ಗಮನಕ್ಕೆ ತರಲಿಲ್ಲ” ಎಂದು ಕೆಡಿಪಿ ಸಭೆಯಲ್ಲಿ ಗಲಾಟೆ ಮಾಡುವ ಜನಪ್ರತಿನಿಧಿಗಳು, ತಮ್ಮದೇ ಕ್ಷೇತ್ರಕ್ಕೆ ಮಂಜೂರಾದ ಸಾವಿರಾರು ಜನರಿಗೆ ಉದ್ಯೋಗ ನೀಡಬಲ್ಲ ನಿಟ್ಟೆ ಜವಳಿ ಪಾರ್ಕ್ ಯೋಜನೆ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಗ್ಗೆ ಏಕೆ ಮೌನವಾಗಿದ್ದಾರೆ? ಸರ್ಕಾರದಿಂದ ಎಲ್ಲ ರೀತಿಯ ಅನುಮತಿ, ಸೌಲಭ್ಯ ಸಿಕ್ಕಿದ್ದರೂ ಯೋಜನೆ ಕಾರ್ಯಗತವಾಗದಂತೆ ತಡೆಯುತ್ತಿರುವುದು ಯಾರ ಹಿತಕ್ಕಾಗಿ? ಜನರ ಬದುಕು ಕಟ್ಟಿಕೊಡುವ ಯೋಜನೆಗಳನ್ನು ಬೆಂಬಲಿಸುವುದು ಜನಪ್ರತಿನಿಧಿಯ ಕರ್ತವ್ಯ.

ಆದರೆ ರಾಜಕೀಯ ದುರುದ್ದೇಶದಿಂದ ಅಭಿವೃದ್ಧಿಗೆ ಅಡ್ಡಿಯಾಗುವುದು ಸಾವಿರಾರು ಬಡ ಕುಟುಂಬಗಳ ಭವಿಷ್ಯಕ್ಕೆ ಹೊಡೆತ ನೀಡಿದಂತಾಗಿದೆ. ವೈಯಕ್ತಿಕ ಪ್ರತಿಷ್ಠೆ ಮುಖ್ಯವೇ? ಅಥವಾ ಜನರ ಹೊಟ್ಟೆ ಪಾಡು ಮುಖ್ಯವೇ? ಜನರ ಅನ್ನದ ಬಟ್ಟಲಿಗೆ ಮಣ್ಣು ಸುರಿಸುವ ರಾಜಕಾರಣವನ್ನು ಸಮಾಜ ಕ್ಷಮಿಸುವುದಿಲ್ಲ.

– ಬೆಳ್ಳಿಪ್ಪಾಡಿ ನೇಮಿರಾಜ್ ರೈ ಸಾಮಾಜಿಕ ಚಿಂತಕ

LEAVE A REPLY

Please enter your comment!
Please enter your name here