ಕಲ್ಲಡ್ಕ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಬಾಲವಿಕಾಸ ಸಮಿತಿ ಕೊಕ್ಕಪುಣಿ ಅಂಗನವಾಡಿ ಕೇಂದ್ರ ವತಿಯಿಂದ ಪೋಷಣ್ ಅಭಿಯಾನ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಬಂಟ್ವಾಳ ತಾಲೂಕು ಬೋಳಂತೂರು ಕೊಕ್ಕಪುಣಿ ಅಂಗನವಾಡಿ ಕೇಂದ್ರದಲ್ಲಿ ಡಿಸೆಂಬರ್ 18 ಗುರುವಾರ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಉಷಾ ಕುಮಾರಿ ವಹಿಸಿದ್ದರು. ಬೋಳಂತೂರು ಪಂಚಾಯತ್ ಅಧ್ಯಕ್ಷ ಶ್ರೀಮತಿ ಶಾಲಿನಿ ಗಿಡಕ್ಕೆ ನೀರು ಏರೆದು ಕಾರ್ಯಕ್ರಮ ಉದ್ಘಾಟಿಸಿದರು.
ವಿಟ್ಲ ಸಮುದಾಯ ಅರೋಗ್ಯ ಕೇಂದ್ರ ವೈದ್ಯಧಿಕಾರಿ ಡಾ. ಶಮಾನ್ ಜೆ ಶೆಟ್ಟಿ ಕ್ಯಾನ್ಸರ್ ಹಾಗೂ ಸ್ಟ್ರೋಕ್ ಅರೋಗ್ಯ ಸಮಸ್ಯೆ ಹಾಗೂ ಪೌಷ್ಟಿಕ ಆಹಾರದಿಂದ ಆಗುವ ಅನುಕೂಲದ ಬಗ್ಗೆ ಮಾಹಿತಿ ನೀಡಿದರು.
ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹೆಚ್ ಐ ಮಾತನಾಡಿ ಕೊಕ್ಕಪುಣಿ ಅಂಗನವಾಡಿ ಕೇಂದ್ರದ ಸ್ಥಳದ ರೆಕಾರ್ಡ್ ನಲ್ಲಿ ಸಮಸ್ಯೆ ಇದ್ದ ಕಾರಣ ಇಲಾಖೆ ಅನುದಾನ ತರಲು ಕಷ್ಟ ಆಗುತ್ತಿದ್ದು ಅತಿ ಶೀಘ್ರದಲ್ಲಿ ಅದನ್ನು ಸರಿಪಡಿಸಿಕೊಂಡು ನೂತನ ಸುಸಜ್ಜಿತವಾದ ಅಂಗನವಾಡಿ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದರು.
ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕಿ ರೂಪಕಲಾ ಅಂಗನವಾಡಿಯ ಹಿರಿಯ ವಿದ್ಯಾರ್ಥಿಗಳು ಹಾಗೂ ಸಮುದಾಯ ಒಟ್ಟು ಸೇರಿಕೊಂಡು ಇನ್ನಷ್ಟು ಅಂಗನವಾಡಿಯನ್ನು ಅಭಿವೃದ್ಧಿಪಡಿಸಲು ಸಹಕರಿಸಿ ಎಂದರು.
ಪಂಚಾಯತ್ ಉಪಾಧ್ಯಕ್ಷ ಯಾಕೂಬ್, ಸದಸ್ಯರಾದ ಸಂದ್ಯಾ,ರುಕ್ಯ, ಬೋಳಂತೂರು ಗ್ರಾಮ ಸಿ ಎಚ್ ಓ ಸಂತೋಷ್ ಬಾಲವಿಕಾಸ ಸಮಿತಿಯ ಸದಸ್ಯರಾದ ಮಹಮ್ಮದ್ ಕುಜ್ಞ, ಹಿರಿಯರಾದ
ಇಸ್ಮೈಲ್, ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು. ಮಕ್ಕಳು ಪ್ರದರ್ಶಿಸಿದ ಮಾನವಿತೆ ಬಗ್ಗೆ ಕಿರು ಪ್ರಹಸನ ಎಲ್ಲರ ಗಮನಸಲೇಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಅಂಗನವಾಡಿ ಹಿರಿಯ ವಿದ್ಯಾರ್ಥಿಗಳು, ಸಮುದಾಯದ ಗಣ್ಯ ವ್ಯಕ್ತಿಗಳು ಸ್ಥಳಿಯ ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು . ಲವೀನ ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ಪವಿತ್ರ ಕಾರ್ಯಕ್ರಮ ನೀರೂಪಿಸಿದರು, ಸಹಾಯಕಿ ಜಯಂತಿ ಸಹಕರಿಸಿದರು.

