
ಬಂಟ್ವಾಳ : ಬಂಟ್ವಾಳ ತಾಲೂಕು ಕಾವಳಪಡೂರು, ಕಾಡೆಬೆಟ್ಟು,ಮದ್ವ ಕಾರ್ಯಕ್ಷೇತ್ರದ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಶ್ರೀ ಶಾರದಾಂಬ ಭಜನಾ ಮಂದಿರ ವಗ್ಗದಲ್ಲಿ ಸೆಪ್ಟಂಬರ್ 20 ಭಾನುವಾರ ಜರಗಿತು.
ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ರೊಟೇರಿಯನ್ ಪ್ರಕಾಶ್ ಕಾರಂತ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವೀರೇಂದ್ರ ಹೆಗ್ಗಡೆ ರವರ ದೂರದೃಷ್ಟಿಯ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿದೆ, ಸರಕಾರಗಳು ಮಾಡದಂತ ಕೆಲಸಗಳನ್ನು ತನ್ನ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಮೂಲಕ ಕಾರ್ಯರೂಪಕ್ಕೆ ತಂದು ಬಡವರ ಪಾಲಿನ ಆಶಾಕಿರಣರಾಗಿದ್ದಾರೆ ಎಂದರು.
ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಟ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಜಿಲ್ಲಾ ನಿರ್ದೇಶಕ ದಿನೇಶ್ .ಡಿ ಗ್ರಾಮಾಭಿವೃದ್ಧಿ ಯೋಜನೆ ಯ ಮೂಲಕ ಅನುಷ್ಠಾನ ಗೊಂಡಿರುವ ಕಾರ್ಯಕ್ರಮಗಳು ಹಾಗೂ ಹಾಗೂ ಅವುಗಳ ಉದ್ದೇಶ ಬಗ್ಗೆ ತಿಳಿಸಿ ಗ್ರಾಮೀಣ ಭಾಗದ ಜನತೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.
ಉದ್ಯಮಿ ಶೃತಾಂಜನ್ ಜೈನ್,ಮಾಣಿಕ್ಯ ರಾಜ್ ಜೈನ್, ಸುಜಿತ್ ಕುಮಾರ್ ಜೈನ್, ಪ್ರಮೋದ್ ಕುಮಾರ್ ರೈ ಶಿವಪ್ಪಗೌಡ , ಭೂಬಸಪಲ್ಯ ಸುರೇಶ್ ಉರುಡಾಯಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲೂಕು ಮಾಸ್ಟರ್ ಪ್ರವೀಣ್ ಕಾಡಬೆಟ್ಟು, ವಗ್ಗ ವಲಯ ಮೇಲ್ವಿಚಾರಕ ಸುರೇಶ್, ವಲಯ ಅಧ್ಯಕ್ಷರ ಉಮೇಶ್,ಮೂರು ಒಕ್ಕೂಟದ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಶ್ರೀ ಗಾಯತ್ರಿದೇವಿ ಭಜನಾ ಮಂಡಳಿಯವರಿಂದ ಕುಣಿತ ಭಜನಾ ಕಾರ್ಯಕ್ರಮ ಹಾಗೂ ಶ್ರೀರಾಮ ಬಾಲ ಗೋಕುಲ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .
ಸಂಘದಲ್ಲಿ ಹಿರಿಯ ಸದಸ್ಯರಾದ ಶಾಂತ ಶೆಟ್ಟಿ ಕಾಡಬೆಟ್ಟು,ವಸಂತ್ ಪೂಜಾರಿ ಕಾವಳಪಡೂರು, ಹಾಗೂ ಸೀತಾ ಮದ್ವ, ಮೆಸ್ಕಾಂ ಕಾರ್ಯಕರ್ತರಾದ ನವೀನ್, ಮುಸ್ತಫ್, ರುದ್ರೇಶ್, ಶೌರ್ಯ ತಂಡದ ತಾಲೂಕು ಮಾಸ್ಟರ್ ಪ್ರವೀಣ್, ಘಟಕ ಪ್ರತಿನಿಧಿ ಸಂಪತ್ ಶೆಟ್ಟಿ ಹಾಗೂ ಸದಸ್ಯರನ್ನು ಗೌರವಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಮಂಜುರಾದ ಸುಜ್ಞಾನ ನಿಧಿ ಪತ್ರವನ್ನು ನೀಡಲಾಯಿತು ಹಾಗೂ ಮೂರು ಉತ್ತಮ ಸಂಘವನ್ನು ಅಭಿನಂದಿಸಲಾಯಿತು .
ದೃವಿ ಪಿ ಕುಂದರ್ ಪ್ರಾರ್ಥಿಸಿದರು ವಲಯದ ಮೇಲ್ವಿಚಾರಕರು ಸುರೇಶ್ ಸ್ವಾಗತಿಸಿದರು. ಒಕ್ಕೂಟಗಳ ವರದಿಯನ್ನು ರೇಖಾ.ಪಿ ವಾಚಿಸಿದರು. ಸುಮಿತ್ರರ ವಂದಿಸಿದರು. ನಿತಿನ್ ಕಾರ್ಯಕ್ರಮವನ್ನು ನಿರೂಪಿಸಿದರು.
