ಅ.15 : ತುಳು ಭವನದಲ್ಲಿ ದಸರಾ ಬಹುಭಾಷಾ ಕವಿಗೋಷ್ಠಿ

0
3

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಆರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯು ಅ.15 ರಂದು ಅಪರಾಹ್ನ 2.30ಕ್ಕೆ ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.
ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್ ಹಾಗೂ ಮಯೂರಿ ಫೌಂಡೇಶನ್ ಜಂಟಿಯಾಗಿ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ.
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ 14 ಭಾಷೆಯ ಕವಿಗಳು ಕವಿತೆ ವಾಚಿಸಲಿದ್ದಾರೆ. ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ,ಸಾಹಿತಿ ಡಾ.ವಾಸುದೇವ ಬೆಳ್ಳೆ ಅವರು ಕವಿಗೋಷ್ಠಿಯನ್ನು ಉದ್ಘಾಟಿಸುವರು. ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಲೇಖಕಿ ಡಾ.ಝೀಟಾ ಲೋಬೋ, ಕವಿ ಯು.ಕೆ ಖಾಲಿದ್ ಉಳ್ಳಾಲ್ಕಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು .
ಮಯೂರಿ ಫೌಂಡೇಶನ್ ಟ್ರಸ್ಟಿ ಪ್ರಬೋದ್ ಕುಡ್ವ ಮುಲ್ಕಿ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಬಹುಭಾಷಾ ಕವಿಗೋಷ್ಠಿಯಲ್ಲಿ ಶಾರದಾ ಶೆಟ್ಟಿ (ತುಳು), ವಿಜಯರಾಜ್ ಪುಣಿಂಚತ್ತಾಯ(ಶಿವಳ್ಳಿ ತುಳು), ರಾಜೇಂದ್ರ ಟಿ.ಕಾರಿಕೆ (ಮಾವಿಲನ್ ತುಳು), ಪ್ರೊ.ಸಂಜೀವ ಕುದ್ಪಾಜೆ(ಅರೆಭಾಷೆ), ಶರತ್ ಕುಮಾರ್ ತುಳುಪುಳೆ(ಚಿತ್ಪಾವನಿ), ಆಯಿಷಾ ಯು.ಕೆ (ಬ್ಯಾರಿ), ಸುಭಾಷ್ ಪೆರ್ಲ (ಮರಾಠಿ), ಆಂಡ್ರ್ಯೂ ಎಲ್. ಡಿ ಡಿಕೂನ್ಹಾ (ಕೊಂಕಣಿ), ಮಂಜುನಾಥ ಗುಂಡ್ಮಿ (ಕುಂದಗನ್ನಡ), ದೀಪಿಕಾ ಉಡುಪಿ (ಕೊರಗ ಭಾಷೆ), ಜೋತ್ಸ್ನ ಎಂ.ಕಡಂದೇಲು (ಕರಾಡ), ರವೀಂದ್ರನ್ ಪಾಡಿ (ಮಲೆಯಾಳಂ), ಶ್ರೀ ಮುದ್ರಾಡಿ (ಕನ್ನಡ), ಮಂಗಳಾ ಎಸ್. ಭಟ್ (ಕೊಂಕಣಿ), ವನಜಾಕ್ಷಿ ಪಿ. ಚೆಂಬ್ರಕಾನ(ಕನ್ನಡ) , ಎನ್ ಸುಬ್ರಾಯ ಭಟ್ (ಹವ್ಯಕ) ಅವರು ಭಾಗವಹಿಸುವರು ಎಂದು ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.