ಮೂಡುಬಿದಿರೆ ಪೊನ್ನೆಚಾರಿ ಸಾರ್ವಜನಿಕ ಶಾರದಾ ಮಹೋತ್ಸವ ಅಕ್ಟೋಬರ್ 16 ಮತ್ತು 17ರಂದು ಪೊನ್ನೆಚಾರಿ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ತಾ 16ರಂದು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಚಿತ್ರಕಲಾ ಸ್ಪರ್ಧೆ, ಅಕ್ಷರಾಭ್ಯಾಸ, ಭಕ್ತಿ ಗೀತೆ ಸ್ಪರ್ಧೆ, ನಡೆಯಲಿದೆ
ತಾ 17ರಂದು ಪಂಚದುರ್ಗಾ ಹವನ, ಏಕಪಾತ್ರಾಭಿನಯ, ಮುದ್ದು ಶಾರದೆ, ಕುಂಕುಮಾರ್ಚನೆ, ಶಾರದಾನುಗ್ರಹ ಪ್ರಶಸ್ತಿ ಡಾ ಎಂ ಪದ್ಮನಾಭ ಉಡುಪ ಹಾಗೂ ಸಿರಿಪುರ ಪ್ರಶಸ್ತಿ ನಿಶ್ಮಿತಾ ನಾರಾಯಣ ಪಿ ಎಂ ಅವರಿಗೆ ನೀಡಲಾಗುವುದು. ಸಂಜೆ ಶೋಭಾ ಯಾತ್ರೆ ನಡೆಯಲಿದೆ ಎಂದು ಕಾಮತ್ ಜ್ಯುವೆಲ್ಲರ್ಸ್ ನ ಎಂಪಿ ಅಶೋಕ್ ಕಾಮತ್ ತಿಳಿಸಿದ್ದಾರೆ.
ವರದಿ- ರಾಯಿ ರಾಜ ಕುಮಾರ್
.

