ಒಲಂಪಿಯಾಡ್ ಪ್ರಮಾಣಪತ್ರ ವಿತರಣೆ

0
11

ಗುರುವಾಯನಕೆರೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಗುರುವಾಯನಕೆರೆ ತಾಲೂಕಿನ ವ್ಯಾಪ್ತಿಯ ಕೂಕ್ರಾಡಿ ಸಾವ್ಯ ಸಿ.ಎಸ್.ಸಿ ಕೇಂದ್ರದಲ್ಲಿ
ಭಾರತ ಸರ್ಕಾರದ IT ಸಚಿವಾಲಯದಿಂದ CSC ಈ ಗವರ್ನೆನ್ಸ್ ಮೂಲಕ ನಡೆಸಲ್ಪಡುವ ಸ್ಪರ್ಧಾತ್ಮಕ ಪರೀಕ್ಷೆಯಾದ ಒಲಿಂಪಿಯಾಡ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೊಂದಾವಣೆ ಮಾಡಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವನ್ನು ಮಾನ್ಯ ಗೌರವಾನ್ವಿತ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಶ್ರೀಯತ ಆನಂದ ಸುವರ್ಣರವರು ವಿತರಣೆ ಮಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಕೊಕ್ರಾಡಿ ಸಾವ್ಯ ಇದರ ಅಧ್ಯಕ್ಷರಾದ ಆನಂದ ಶೆಟ್ಟಿ , ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ರಾಜು ಶೆಟ್ಟಿ ಪಿ ಪೂನ್ನೆಮಾರಡ್ಕ ಹಾಗೂ ಜಯರಾಜ್ ಹೆಗ್ಡೆ ಸಾಂತ್ಯಾಲು ಸಾವ್ಯ, ತಾಲೂಕಿನ ಯೋಜನಾಧಿಕಾರಿಗಳಾದ ಹರೀಶ್ ಆರ್.ಎಸ್ , ಕೊಕ್ರಾಡಿ ಒಕ್ಕೂಟದ ಅಧ್ಯಕ್ಷರಾದ ವಾರಿಜಾ, ಸಾವ್ಯ ಒಕ್ಕೂಟದ ಅಧ್ಯಕ್ಷರಾದ ಯಮುನಾ ನಾರಾವಿ ವಲಯದ ಮೇಲ್ವಿಚಾರಕಿ ವಿಶಾಲ , ತಾಲೂಕು ನೊಡೆಲ್ ಅಧಿಕಾರಿ ಸುರೇಶ್ ನಾಯ್ಕ, ಸಿ.ಎಸ್.ಸಿ ಸೇವಾದಾರರಾದ ಭವ್ಯ ಶ್ರೀ, ಸೇವಾ ಪ್ರತಿನಿಧಿ ಶಶಿಧರ ಇವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here