ಮೂಡುಬಿದಿರೆ : ತಾಲೂಕಿನ ಬೆಳ್ವಾಯಿ ಗ್ರಾಮದ ಕುಕ್ಕುಡೇಲ್ ಪರಿಸರದಲ್ಲಿ ಅ.15ರಂದು ಮರಾಠಿ ಸಮುದಾಯದ ಬಹು ದಿನಗಳ ಕನಸಿನ ಸುಸಜ್ಜಿತ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿದೆ. ಉದ್ಘಾಟಕರಾಗಿ ಕೆ. ಅಭಯ ಚಂದ್ರ ಜೈನ್, ಉಮಾನಾಥ್. ಎ. ಕೋಟ್ಯಾನ್, ಭಾಸ್ಕರ್. ಎಸ್. ಕೋಟ್ಯಾನ್, ಸಂಜೀವ ನಾಯ್ಕ್, ರಾಘು ಪೂಜಾರಿ ಗೋಲಾರ, ಲಕ್ಷ್ಮಣ ನಾಯ್ಕ್ ಮಾಳ, ರಾಮಚಂದ್ರ ಕೆಂಬಾರೆ ಭಾಗವಹಿಸಲಿದ್ದು. ಸುಂದರ್ ನಾಯ್ಕ್ ಕುಕ್ಕುಡೆಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಕೃಷ್ಣ ಬಿ ನಾಯ್ಕ್, ಸಂಚಾಲಕರು, ಅಣ್ಣಪ್ಪ ಬಿ ನಾಯ್ಕ್ ಗೌರವಧ್ಯಕ್ಷರು, ಯೋಗೀಶ್. ಬಿ. ಬಿ ನಾಯ್ಕ್ ಅಧ್ಯಕ್ಷರು ಅಭಿವೃದ್ಧಿ ಸಮಿತಿ , ಶ್ರೀನಿವಾಸ್ ನಾಯ್ಕ್ ಕಾರ್ಯದರ್ಶಿ, ರಾಧಾಕೃಷ್ಣ ರಾವ್ ಕೋಶಾಧಿಕಾರಿ, ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರ ಮುಂದಾಳತ್ವದಲ್ಲಿ ತೃತೀಯ ವರ್ಷದ ವಾರ್ಷಿಕ ಪುನರ್ ಪ್ರತಿಷ್ಠಾಪನಾ ವರ್ದಂತಿ ಉತ್ಸವ ಮತ್ತು ಸಾಮೂಹಿಕ ಶ್ರೀ ದುರ್ಗಾನಮಸ್ಕಾರ ಪೂಜೆಯು ಯಶಸ್ವಿ ಕಾರ್ಯಕ್ರಮ ನೆರವೇರಲಿದೆ.
ಮದ್ಯಾಹ್ನ ಅನ್ನ ಸಂತರ್ಪಣೆ, ಸಾಂಸ್ಕೃತಿಕ ನೃತ್ಯ ವೈವಿದ್ಯ ರಾತ್ರಿ 10ಗಂಟೆಗೆ ಸರಿಯಾಗಿ ಸಿಂಧೂರ ಕಲಾವಿದರು ಕಾರ್ಲ ಇವರಿಂದ ಡೊಂಬರಾಟ ನಾಟಕ ಪ್ರದರ್ಶನಗೊಳ್ಳಲಿದೆ.
2000-2001ನೇ ಸಾಲಿನಲ್ಲಿ ದಿವಂಗತ ಮೋಹನ್ ನಾಯ್ಕ್ ಕುಕ್ಕುಡೇಲ್ ಸ್ಥಾಪಕ ಅಧ್ಯಕ್ಷರಾಗಿ ಆರಂಭಿಸಿದ ಶ್ರೀ ಮಹಮ್ಮಾಯಿ ಭಜನಾ ಮಂದಿರವು 2007ದ ವರೆಗೆ ಇವರ ಮುಂದಾಳತ್ವ ದಲ್ಲಿ ಮುಂದುವರಿದಿದ್ದು, ನಂತರ 2007ರಲ್ಲಿಯೇ ಸುಂದರ್ ನಾಯ್ಕ್ ಕುಕ್ಕುಡೆಲ್ ಅಧ್ಯಕ್ಷರಾಗಿ ಆಯ್ಕೆಯಾಗಿ ಬರೋಬರಿ ಇಂದಿನವರೆಗೆ ನಿರಂತರ 19ವರ್ಷಗಳ ಕಾಲ ಮರಾಠಿ ಸಮುದಾಯವು ಮುಂದುವರಿಸಿ ಎಷ್ಟೇ ಅತ್ಯುತ್ತಮ ಧಾರ್ಮಿಕ ಕಾರ್ಯಕ್ರಮ ಮತ್ತು ಭಜನಾ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದರೂ ಅ.15ರಂದು ಲೋಕಾರ್ಪಣೆ ಗೊಳ್ಳಲಿರುವ ಮರಾಠಿ ಸಮುದಾಯ ಭವನವೇ ಸಮುದಾಯದ ಅತ್ಯುನ್ನತ ಕಾರ್ಯ ಒಗ್ಗಟ್ಟಿನಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು ಎಷ್ಟರ ಮಟ್ಟಿಗೆ ಕಾರ್ಯವೈಖರಿ ಯಶಸ್ವಿಯಾಗಿದೆ. ಎಂಬುದಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.
ಕೇವಲ ಮರಾಠಿ ಸಮುದಾಯ ಮಾತ್ರವಲ್ಲದೆ ಬೆಳ್ವಾಯಿ ಗ್ರಾಮದ ಸಮಸ್ತ ನಾಗರಿಕರ ಸಹಕಾರವನ್ನು ಆಡಳಿತ ಮಂಡಳಿಯು ಕಾರ್ಯಕ್ರಮದ ಯಶಸ್ಸಿಗೆ ಸಹಕಾರವನ್ನು ಕೋರಿದೆ.
ವರದಿ :ಪ್ರವೀಣ್. ಆರ್. ಕೋಟ್ಯಾನ್. ಮಾರ್ನಾಡ್.

