ಪಾಕಿಸ್ತಾನಿ ಭಯೋತ್ಪಾದಕರ ಮೇಲಿನ ಕಾರ್ಯಾಚರಣೆ :
ಹಿಂದೂ ಸಮಾಜದ ಅಸ್ಮಿತೆಯ ನಿರ್ಣಾಯಕ ಪ್ರತಿಕಾರ ! – ಸನಾತನ ಸಂಸ್ಥೆ

0
115

“ಭಾರತೀಯ ಸೈನ್ಯವು ಮಾರ್ಚ್ 7 ಕ್ಕೆ ಪಾಕಿಸ್ತಾನದಲ್ಲಿನ 9 ಭಯೋತ್ಪಾದಕ ಕೇಂದ್ರಗಳ ಮೇಲೆ ಅತ್ಯಂತ ನಿಖರವಾಗಿ ಮತ್ತು ನಿರ್ಣಾಯಕವಾಗಿ ವೈಮಾನಿಕ ದಾಳಿ ನಡೆಸಿ ಆ ಕೇಂದ್ರಗಳನ್ನು ನಾಶ ಮಾಡಿದೆ. ಇದು ಕೇವಲ ಒಂದು ಸೈನ್ಯದ ಕಾರ್ಯಾಚರಣೆಯಲ್ಲ, ದೇಶದ ಗೌರವ, ಸುರಕ್ಷತೆ ಮತ್ತು ಆತ್ಮ ಸನ್ಮಾನದ ಶಂಖನಾದವಾಗಿದೆ, ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಇವರು ಪ್ರತಿಪಾದಿಸಿದ್ದಾರೆ.
ಅವರು ಮಾತು ಮುಂದುವರೆಸಿ, ಜಮ್ಮು ಕಾಶ್ಮೀರದಲ್ಲಿನ ಪಹಲ್ಗಾವ್ ನಲ್ಲಿ 26 ಅಮಾಯಕ ಹಿಂದೂ ಪ್ರಯಾಣಿಕರ ಬರ್ಬರ ಹತ್ಯೆ ಮಾಡಲಾಗಿತ್ತು, ಈ ದಾಳಿ ಕೇವಲ ಕೆಲವು ವ್ಯಕ್ತಿಗಳ ಮೇಲೆ ಆಗದೆ, ಸಂಪೂರ್ಣ ಹಿಂದೂ ಸಮಾಜದ ಮೇಲೆ ಆಗಿತ್ತು. ಭಾರತದ ಸಂಸ್ಕೃತಿಯ ಮೇಲೆ ಆಗಿತ್ತು. ಈ ಕ್ರೂರತೆಯ ಪ್ರತಿಕಾರ ಭಾರತೀಯ ಸೈನ್ಯ ತೆಗೆದುಕೊಂಡಿದೆ. ಇದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ಭಾರತೀಯರ ಹೃದಯಕ್ಕೆ ಸಮಾಧಾನ ತಂದಿದೆ.
ಸನಾತನ ಸಂಸ್ಥೆಯ ವತಿಯಿಂದ ಈ ನಿರ್ಣಾಯಕ ಕಾರ್ಯಾಚರಣೆಯನ್ನು ನಾವು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ಕೇವಲ ಸೇಡು ಅಷ್ಟೇ ಅಲ್ಲದೆ, ಇದು ಹಿಂದೂಗಳ ಸುರಕ್ಷತೆಗಾಗಿ ಮತ್ತು ಭಾರತದ ಅಖಂಡತೆಗಾಗಿ ತೆಗೆದುಕೊಂಡಿರುವ ಸಾಹಸಿ ಹೆಜ್ಜೆ ಆಗಿದೆ.
ಭಾರತದಲ್ಲಿನ ಹಿಂದೂಗಳು ಈಗ ಎಚ್ಚರಗೊಂಡಿದ್ದಾರೆ. ಆದ್ದರಿಂದ ಅವರ ಆಗ್ರಹಕ್ಕೆ ಬೆಲೆ ಕೊಟ್ಟು ಸರಕಾರ ಪಾಕಿಸ್ತಾನಕ್ಕೆ ಸರಿಯಾದ ಪ್ರತ್ಯುತ್ತರ ನೀಡಿದೆ. ಇನ್ನೇನಾದರೂ ಪಾಕಿಸ್ತಾನವು ಬೇರೆಯ ರೀತಿ ಪ್ರಯತ್ನ ಮಾಡುವ ಬಗ್ಗೆ ಯೋಚಿಸಿದರೆ ಇದಕ್ಕಿಂತಲೂ ಹೆಚ್ಚಿನ ಕಠಿಣ ರೀತಿಯಲ್ಲಿ ಉತ್ತರ ದೊರೆಯುವುದು, ಇದನ್ನು ಇಂದಿನ ಕಾರ್ಯಾಚರಣೆಯಿಂದ ಭಾರತೀಯ ಸೈನ್ಯ ಸ್ಪಷ್ಟಪಡಿಸಿದೆ.
‘ಸನಾತನ ರಾಷ್ಟ್ರ ಶಂಖನಾದ ಇದು ಕೇವಲ ಘೋಷಣೆಯಲ್ಲ. ಹಿಂದೂ ಸಮಾಜದ ಮೇಲಿನ ಅನ್ಯಾಯದ ವಿರುದ್ಧ ಹಿಂದೂಗಳ ಒಗ್ಗಟ್ಟಿನ ಘರ್ಜನೆಯಾಗಿದೆ. ಸಂಪೂರ್ಣ ಹಿಂದೂ ಸಮಾಜ ಭಾರತೀಯ ಸೈನ್ಯದ ಜೊತೆಗೆ ಒಗ್ಗಟ್ಟಿನಿಂದ ನಿಂತಿದೆ.

LEAVE A REPLY

Please enter your comment!
Please enter your name here