ಬಂಟ್ವಾಳ : ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷ ಅನಂತ ಚತುರ್ದಶಿ ವೃತ ಪರ್ವಕಾಲದಲ್ಲಿ ಸಾರ್ವಜನಿಕರಿಗೆ ತೆನೆ ಹಬ್ಬದ ಅಂಗವಾಗಿ ಭತ್ತದಕೊರಳು ವಿತರಿಸುವ ಸಲುವಾಗಿ ದೇವಾಲಯದ ವಟಾರದಲ್ಲಿ ಭತ್ತದ ಬೆಳೆ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್., ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕೆ ರಾಧಾಕೃಷ್ಣ ಆಳ್ವ. ಸುಧಾಕರ ಕೆಟಿ, ಕಿಶನ್ ಸೇಣವ,ರಾಮ ಬರೆ ಮೊದಲಾದವರು ಉಪಸ್ಥಿತರಿದ್ದರು.

