Saturday, June 14, 2025
Homeಮೂಡುಬಿದಿರೆಪಡು ಕೊಣಾಜೆ : 12 ರಂದು ಶಿಥಿಲ ಶಾಲಾ ಕಟ್ಟಡದ ಸಾಮಗ್ರಿಗಳ ಬಹಿರಂಗ ಏಲಂ

ಪಡು ಕೊಣಾಜೆ : 12 ರಂದು ಶಿಥಿಲ ಶಾಲಾ ಕಟ್ಟಡದ ಸಾಮಗ್ರಿಗಳ ಬಹಿರಂಗ ಏಲಂ

ಮೂಡುಬಿದಿರೆ ಜೂನ್ 9: ಮೂಡಬಿದ್ರೆ ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡು ಕೊಣಾಜೆಯಲ್ಲಿ ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ಕೆಡವಿ ಅದರ ಹಳೆಯ ಸಾಮಗ್ರಿಗಳನ್ನು ಬಹಿರಂಗ ಏಲಂ ಮೂಲಕ ಮಾರಾಟ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಏಲಂ 12 ಜೂನ್ 2025ರಂದು ಬೆಳಿಗ್ಗೆ 10:00 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ.

ಬಹಿರಂಗ ಏಲಂನಲ್ಲಿ ಹಳೆಯ ಮಂಗಳೂರು ಹಂಚುಗಳು, ಪಕ್ಕಾಸು, ಬಾಗಿಲು-ಕಿಟಕಿಗಳು ಸೇರಿದಂತೆ ಇತರೆ ವಸ್ತುಗಳನ್ನು ಒಳಗೊಂಡಿರುತ್ತದೆ. ಗೋಡೆ, ಬೇಸ್‌ಮೆಂಟ್ ಸೇರಿದಂತೆ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೆಲ ಸಮತಟ್ಟಾಗಿ ಮಾಡಬೇಕಾಗುತ್ತದೆ. ಈ ಎಲ್ಲಾ ಕೆಲಸದ ಸಂಪೂರ್ಣ ಖರ್ಚು ಬಿಡ್ಡುದಾರರೇ ಭರಿಸಬೇಕಾಗುತ್ತದೆ.

ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು EMD ಠೇವಣಿ ರೂ. 500ನ್ನು 12ರ ಬೆಳಿಗ್ಗೆ 9:45ರೊಳಗೆ ಮುಖ್ಯ ಶಿಕ್ಷಕರ ಕಛೇರಿಯಲ್ಲಿ ಪಾವತಿಸಬೇಕು. ಯಶಸ್ವಿಯಾದ ಬಿಡ್ಡುದಾರರು ಏಲಂ ಮೊತ್ತದ ಶೇಕಡಾ 50 ರಷ್ಟು ತಕ್ಷಣ ಪಾವತಿಸಬೇಕಾಗಿದ್ದು, ಉಳಿದ ಮೊತ್ತವನ್ನು ಕಟ್ಟಡ ತೆರವುಗೊಳಿಸುವ ಮೊದಲು ಪೂರೈಸಬೇಕು.

ಮಹತ್ವದ ನಿಬಂಧನೆಗಳು:

  • ಶಾಲೆಯ ಇತರೆ ಕೊಠಡಿಗಳಿಗೆ ಅಥವಾ ವಿದ್ಯಾರ್ಥಿ-ಶಿಕ್ಷಕರಿಗೆ ಯಾವುದೇ ಹಾನಿ ಸಂಭವಿಸದಂತೆ ಮುಂಜಾಗ್ರತೆ ಕಡ್ಡಾಯ.
  • ಹಾನಿಯಾದರೆ ಉತ್ತರದಾಯಕತೆ ಬಿಡ್ಡುದಾರರೇ ಹೊರುತ್ತಾರೆ.
  • 10 ದಿನಗಳ ಒಳಗೆ ಕಟ್ಟಡ ತೆರವುಗೊಳಿಸಬೇಕು.
  • ಏಲಂ ಮುಗಿದ ನಂತರ ಯಾವುದೇ ದೂರುಗಳು ಸ್ವೀಕರಿಸಲಾಗುವುದಿಲ್ಲ.
  • ಕಾಮಗಾರಿ ವಿಳಂಬವಾದರೆ ಪಾವತಿಸಿದ ಮೊತ್ತವನ್ನು ಮುಟ್ಟುಗೋಲು ಹಾಕಲಾಗುತ್ತದೆ.

ಆಸಕ್ತರು ನಿಯೋಜಿತ ಸಮಯಕ್ಕೆ ಶಾಲೆಯಲ್ಲಿ ಹಾಜರಿರಬೇಕು ಎಂದು ಶಾಲಾ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES
- Advertisment -
Google search engine

Most Popular