ದಸ್ಕತ್ ಚಲನಚಿತ್ರಕ್ಕೆ RED FM ತುಳು ಫಿಲ್ಮ್ ಅವಾರ್ಡ್ಸ್

0
32

ತುಳು ಭಾಷೆಯಲ್ಲಿ ತೆರೆಕಂಡು ಮೊದಲ ಪ್ಯಾನ್ ಇಂಡಿಯಾ ಮೂವಿ ಎಂದು ಹೆಗ್ಗಳಿಕೆ ಪಡೆದ ದಸ್ಕತ್ ಚಲನಚಿತ್ರಕ್ಕೆ RED FM ಪ್ರಸ್ತುತ ಪಡಿಸುವ ತುಳು ಫಿಲ್ಮ್ ಅವಾರ್ಡ್ಸ್ ನಲ್ಲಿ
ಒಟ್ಟು ಐದು ಪ್ರಶಸ್ತಿಗಳನ್ನು ಲಭಿಸಿದೆ.
ಎರಡು ವರ್ಷಗಳ ತುಳು ಚಲನಚಿತ್ರಗಳನ್ನು ಸ್ಪರ್ಧೆಯಲ್ಲಿ ಒಳಪಡಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.

• ಉತ್ತಮ ಚಲನಚಿತ್ರ ದಸ್ಕತ್
• ಉತ್ತಮ ನಿರ್ದೇಶಕ – ಅನೀಶ್ ಪೂಜಾರಿ ವೇಣೂರು
• ಉತ್ತಮ ನಾಯಕ ನಟ – ದೀಕ್ಷಿತ್ ಕೆ ಅಂಡಿಂಜೆ
• ಉತ್ತಮ ಖಳ ನಟ – ಯುವ ಶೆಟ್ಟಿ
• ಉತ್ತಮ ಪೋಷಕ ನಟ – ಮೋಹನ್ ಶೇಣಿ

ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ದಸ್ಕತ್ ಚಲನಚಿತ್ರಕ್ಕಿದ್ದು ವಿದೇಶದಲ್ಲೂ ಜನಮಾನಸ ಗೆದ್ದು, ಇತ್ತೀಚೆಗೆ ಕನ್ನಡ ಭಾಷೆಯಲ್ಲೂ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ.
ರಾಘವೇಂದ್ರ ಕುಡ್ವ ರವರು ಚಿತ್ರವನ್ನು ನಿರ್ಮಾಣ ಮಾಡಿದ್ದು, ತುಳುವಿನ ದಸ್ಕತ್ ಇಂತಹ ಅಭೂತಪೂರ್ವ ಯಶಸ್ಸು ಕಂಡದ್ದು ಹೆಮ್ಮೆಯ ಸಂಗತಿ.

LEAVE A REPLY

Please enter your comment!
Please enter your name here