ಪಡುಬಿದ್ರೆ : ಹೆಜಮಾಡಿ ಗರಡಿ ನೇಮೋತ್ಸವದಲ್ಲಿ ಸರ ಕಳ್ಳತನ ಪ್ರಕರಣ – ಮೂವರು ಆರೋಪಿಗಳ ಸೆರೆ

0
139

ಪಡುಬಿದ್ರೆ : ಹೆಜಮಾಡಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೊತ್ಸವದಲ್ಲಿ ವೃದ್ಧ ಮಹಿಳೆಯ ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀಥಲ್, ಕಾಳಿಯಮ್ಮ ಹಾಗೂ ಮಾರಿ ಬಂಧಿತ ಆರೋಪಿಗಳು. ಹೆಜಮಾಡಿಯ ಕಮಲ (78) ಎಂಬವರು ಡಿ.24 ರಂದು ಮನೆಯ ಬಳಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೊತ್ಸಕ್ಕೆ ಹೋಗಿದ್ದರು. ದೈವದ ದರ್ಶನ ಮಾಡಿ ನಂತರ ಅಲ್ಲಿಗೆ ಬಂದ ತನ್ನ ಶಾರದಾ ಪೂಜಾರಿ ಎಂಬವರು ಕಮಲ ಅವರ ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದೆ ಇರುವ ಬಗ್ಗೆ ತಿಳಿಸಿದರು. ಡಿ.25 ರಂದು ಸಂಜೆ ದೇವಸ್ಥಾನದ ಆಡಳಿತ ಮಂಡಳಿಯವರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮೂರು ಅಪರಿಚಿತ ಮಹಿಳೆಯರು ಕಮಲ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಗಮನಕ್ಕೆ ಬಾರದೆ ಕುತ್ತಿಗೆಯಲ್ಲಿದ್ದ ಸುಮಾರು 3 ಪವನ್ ಚಿನ್ನದ ಸರವನ್ನು ಕಳವು ಮಾಡಿರುವುದು ಕಂಡುಬಂದಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಮೂವರು ಆರೋಪಿಗಳನ್ನು ಪುತ್ತೂರಿನಲ್ಲಿ ಬಂಧಿಸಿದ್ದಾರೆ. ಅವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here