ಭವ್ಯ ಸುಧಾಕರ್ ಜಗಮನೆಗೆ ಕನ್ನಡ ಪಯಸ್ವಿನಿ ಪ್ರಶಸ್ತಿ 2026

0
58

ಭವ್ಯ ಸುಧಾಕರ ಜಗಮನೆ ಶಿವಮೊಗ್ಗ ಕಿರುಪರಿಚಯ : ನಗುಮೊಗದ ಸಾಹಿತ್ಯ ಸುಮವಾದ ಭವ್ಯ ಸುಧಾಕರಜಗಮನೆ ಹಾಸನ ಜಿಲ್ಲೆ ಬೇಲೂರು ತಾಲೂಕು ನಾರಾಯಣಪುರ ಎಂಬ ಪುಟ್ಟ ಹಳ್ಳಿಯಲ್ಲಿ ಲೋಕೇಶ್ ಮತ್ತು ರತ್ನಮ್ಮ ಎಂಬ ಕ್ರಿಯಾಶೀಲ ಕೃಷಿಕರ ಮಗಳು ಪ್ರಸ್ತುತ ಶಿವಮೊಗ್ಗದ ಸುಧಾಕರ ಅವರ ಪ್ರಿಯ ಪತ್ನಿಯಾಗಿ ಮಲೆನಾಡ ಮುದ್ದು ಸೊಸೆಯಾಗಿದ್ದಾರೆ.

ಇವರು ಈಗಾಗಲೇ 5ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಪಾದಕರಾಗಿ ಸ್ವತಃ ಪ್ರಕಾಶಕಿಯಾಗಿ ವಚನಸುಧೆ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಸಹಸಂಪಾದಕಿಯಾಗಿ ಎರಡು ಪುಸ್ತಕ ಪ್ರಕಟಿಸಿದ್ದಾರೆ. ಅಕ್ಕರೆಯ ಮಕ್ಕಳ ಅಂಗಳ ಎಂಬ ಸಂಸ್ಥೆಯ ಮೂಲಕ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಿರಂತರವಾಗಿ ನಡೆಸುತ್ತ ಅಭಿನಂದನಪತ್ರ ನೀಡುತ್ತ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತ ಬರತ್ತಿದ್ದಾರೆ.ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕಾಗಿ ರಾಜ್ಯಮಟ್ಟದಲ್ಲಿ 11 ದಿನಗಳ ಉಚಿತ ಬೇಸಿಗೆ ಶಿಬಿರವನ್ನು ಅಂತರ್ಜಾಲದ ಮುಖೇನ ಯಶಸ್ವಿಯಾಗಿ ನಡೆಸಿದ್ದಾರೆ.

ಭಾರತಾಂಬೆ ಭಾವಸುಧೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಹಲವಾರು ಸಾಹಿತ್ಯ ಸಂಗೀತ ಚಟುವಟಿಕೆಗಳನ್ನು ನಡೆಸುತ್ತ ಅನೇಕ ಸಾಹಿತಿಗಳು, ಸಂಗೀತಗಾರರು, ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಪ್ರಥಮಬಾರಿಗೆ ಆಧುನಿಕ ರಾಷ್ಟ್ರ ಮಟ್ಟದ ಆಧುನಿಕ ವಚನ ಘೋಷ್ಠಿಯನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ನಡೆಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಆಪ್ತ ಸಮಾಲೋಚಕಿಯಾಗಿ, ನಿಸ್ವಾರ್ಥ ಸಮಾಜ ಸೇವಕಿಯಗಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರಿಂದ ಇನ್ನೂ ಸಾಕಷ್ಟು ಅತ್ಯುತ್ತಮ ಕಾರ್ಯಗಳು ಆಗಲಿ ಎಂದು ಶುಭ ಹಾರೈಸೋಣ.

ಇವರೀಗೆ ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ, 25ನೇ ವರ್ಷಾಚರಣೆ “ರಜತ ಸಂಭ್ರಮ “ಆಚರಿಸುವ ಸಲುವಾಗಿ ಇದೇ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ ವೇದಿಕೆಯಲ್ಲಿ ನಡೆಯುವ -ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಪ್ರಶಸ್ತಿ , ಅಚೀವ್ಮೆಂಟ್ ಅವಾರ್ಡ್ ನೀಡಿ ಗೌರವಿಸಲಿದೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here