Saturday, June 14, 2025
Homeಮೂಡುಬಿದಿರೆಪಡುಮಾರ್ನಾಡು: ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ದನ, ಕೇರೆ, ಉಡ ಸಾವು

ಪಡುಮಾರ್ನಾಡು: ತುಂಡಾದ ವಿದ್ಯುತ್ ತಂತಿ ಸ್ಪರ್ಶಿಸಿ ದನ, ಕೇರೆ, ಉಡ ಸಾವು

ಬೆಳುವಾಯಿ: ಪಡುಮಾರ್ನಾಡು ಗ್ರಾಮ ಕೊಪ್ಪಳ ಪ್ರದೇಶದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಜಾಗದಲ್ಲಿ ವಿದ್ಯುತ್ ಸ್ಪರ್ಶಸಿ ಎರಡು ಹಸುಗಳು ಮೃತಪಟ್ಟಿದೆ. ಹಸುಗಳು ವಿದ್ಯುತ್ ಸ್ಪರ್ಶಿಸಿದಾಗ ಬೊಬ್ಬೆ ಹೊಡೆದಿರುವುದರಿಂದ ಪ್ರಕರಣ ಬೆಳಕಿಗೆ ಬಂತು. ಎರಡು ಉಡ, ಸುಮಾರು ಹತ್ತು ಕೇರೆ ಹಾವುಗಳು ಕೂಡ ಈ ಜಾಗದಲ್ಲಿ ಸತ್ತ ಸ್ಥಿತಿಯಲ್ಲಿ ಕಂಡು ಬಂದಿದೆ.
ಹಾಗಾಗಿ ತಂತಿ ತುoಡಾಗಿ ವಾರ ವಾಗಿರಬೇಕು ಎಂದು ಅಂದಾಜಿಸಲಾಗಿದೆ. ಪಂಚಾಯತ್ ಸದಸ್ಯ ರಮೇಶ್ ಎಸ್. ಶೆಟ್ಟಿಯವರ ವಾರ್ಡ್ ನಲ್ಲಿ ಈ ಘಟನೆ ನಡೆದಿದ್ದು ಸಂಬಂದಿತ ಇಲಾಖೆಗೆ ತಿಳಿಸಿ ಸೂಕ್ತ ಕ್ರಮ ಜರುಗಿಸಲು ಪ್ರಯತ್ನ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular