ಪಾಡ್ಯಾರು ಶಾಲೆ: ಸ್ವಚ್ಛತೆ, ಆರೋಗ್ಯ-ಪ್ಲಾಸ್ಟಿಕ್ ನಿಷೇಧದ ಅಗತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ

0
23

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಪಾಡ್ಯಾರು ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಜುಲೈ 4 ರಂದು ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಚ್ಛತೆಯ ಅಗತ್ಯ, ಉಪಯೋಗಿಸುವ ತೆಳು ಪ್ಲಾಸ್ಟಿಕ್ ಬಿಸಾಡುವುದರಿಂದ ಪರಿಸರಕ್ಕೆ ಆಗುವ ಹಾನಿ, ಪ್ಲಾಸ್ಟಿಕ್ ನಿಷೇಧದ ಅಗತ್ಯದ ಕುರಿತು ವಿವಿಧ ಉದಾಹರಣೆಗಳ ಮೂಲಕ ಮಾಹಿತಿ ನೀಡಲಾಯಿತು. ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಉಪಯುಕ್ತ ಕಥೆ ಹಾಗೂ ಲೇಖನಗಳ ಪುಸ್ತಕಗಳನ್ನು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಲೈಬ್ರರಿಗೆ ನೀಡಲಾಯಿತು. ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ಸ್ವಾಗತಿಸಿದರು. ಪ್ರತಿಭಾ ಕಾರ್ಯಕ್ರಮ ಸಂಯೋಜಿಸಿ, ರಾಬರ್ಟ್ ವಂದಿಸಿದರು.

LEAVE A REPLY

Please enter your comment!
Please enter your name here