ಮೂಡಬಿದಿರೆ: ಕರ್ನಾಟಕ ರಾಜ್ಯ ಕಾಂಗ್ರೆಸ್ ಆಡಳಿತದ ವೈಫಲ್ಯ ಪ್ರಶ್ನಿಸಿ ದಿನೇಶ್ ಕಂಗ್ಲಾಯಿ ನೇತೃತ್ವದಲ್ಲಿ ಹಾಗೂ ಬಿಜೆಪಿ ಕಾರ್ಯಕರ್ತರು ಗ್ರಾಮದ ಪ್ರಮುಖರು ಸೇರಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನ ಕಾರರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವಕೀಲರದ ಕೆ ಆರ್ ಪಂಡಿತ್ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ದರವನ್ನು ಹೆಚ್ಚಳಗೊಳಿಸಿ ಕಾಂಗ್ರೆಸ್ ಸರಕಾರ ವಂಚಿಸಿದೆ. ಅಕ್ರಮ ಸಕ್ರಮ, 9/11, ಹಕ್ಕು ಪತ್ರ ನೀಡುವಲ್ಲಿ ವಿಫಲವಾಗಿದೆ.
ಕಡಿಮೆ ದರದಲ್ಲಿ ಸಿಗುತ್ತಿದ್ದ ಹೊಯ್ಗೆ, ಕೆಂಪು ಕಲ್ಲು ಸ್ಥಗಿತ ಗೊಳಿಸಿ , ದರ ಹೆಚ್ಚಳ ಆಗುವಲ್ಲಿ ರಾಜ್ಯ ಸರಕಾರ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದರು. ಕಾಂಗ್ರೆಸ್ ಸರಕಾರ ಆಡಳಿತ ಚುಕ್ಕಾಣಿ ಹಿಡಿದ ನಂತರ ದೊಡ್ಡ ಮಟ್ಟದ ಭ್ರಷ್ಟಾಚಾರ ದಲ್ಲಿ ಭಾಗಿಯಾಗಿರುವುದಾಗಿ ಮಾಧ್ಯಮಗಳು ಪ್ರಕಟಿಸುತ್ತಿರುವುದನ್ನು ತಿಳಿಸಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಕುಮಾರ್ ಪ್ರಸಾದ್, ಬಿಜೆಪಿ ಹಿರಿಯ ಕಾರ್ಯಕರ್ತರಾದ ಮೋಹನ್ ಶೆಟ್ಟಿ, ಚಂದ್ರ ಶೇಖರ್ ಶೆಟ್ಟಿ, ಸತೀಶ್ ಆಚಾರ್ಯ, ನಾಗರಾಜ ಪೂಜಾರಿ,ಮಂಡಲ ಓಬಿಸಿ ಮೋರ್ಚಾ ಕಾರ್ಯದರ್ಶಿ ಸಂತೋಷ್ ಭಂಡಾರಿ, ಬೂತ್ ಅಧ್ಯಕ್ಷ ಜಗದೀಶ್ ಕಲ್ಲೋಟ್ಟು, ಪಂಚಾಯತ್ ಸದಸ್ಯ ಸುಕೇಶ್ ಶೆಟ್ಟಿ, ರೇಖಾ, ಕಾಂತಿ, ಹರಿಣಿ ರಂಜಿತ್ ಭಂಡಾರಿ, ಊರ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
