ಮಿಂಚಿನ ಓಟದ ಕಂಬಳದ ಕೋಣ ಪಾಂಡು ಇನ್ನಿಲ್ಲ

0
33

ಉಡುಪಿ : ಕಂಬಳ ಕ್ಷೇತ್ರದ ದಂತಕತೆ, ಅಪಾರ ಅಭಿಮಾನಿಗಳ ನೆಚ್ಚಿನ ಕೋಣ, ಮಿಂಚಿನ ಓಟದ ಮೂಲಕ ಕಂಬಳ ಪ್ರಿಯರ ಮನಗೆದ್ದಿದ್ದ ನಂದಳಿಕೆಯ ‘ಪಾಂಡು’ ಕಂಬಳದ ಕೋಣ ಅನಾರೋಗ್ಯದಿಂದ ಸೆ.28ರಂದು ಮುಂಜಾನೆ ನಿಧನ ಹೊಂದಿದೆ.

ನಂದಳಿಕೆ ಶ್ರೀಕಾಂತ್ ಭಟ್ ಅವರ ಮನೆಯ ಹಿರಿಯ ಸದಸ್ಯನಂತಿದ್ದ ಪಾಂಡು, ಕಂಬಳ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ತನ್ನದೇ ಛಾಪು ಮೂಡಿಸಿತ್ತು. 8 ವರ್ಷಗಳ ಕಾಲ ಚಾಂಪಿಯನ್ ಆಗಿ ಮೆರೆದಿದ್ದ ಪಾಂಡು, 150ಕ್ಕೂ ಅಧಿಕ ಪದಕಗಳನ್ನು ತನ್ನದಾಗಿಸಿಕೊಂಡಿತ್ತು.

ಕಂಬಳದ ಕಣದಲ್ಲಿ ಮಿಂಚಿನ ವೇಗದಲ್ಲಿ ಓಡುತ್ತಿದ್ದ ಪಾಂಡು ತನ್ನ ಅದ್ಭುತ ಪ್ರದರ್ಶನದಿಂದ ಮಾಲೀಕರಿಗೆ ಹಲವು ಗೌರವಗಳನ್ನು ತಂದುಕೊಟ್ಟಿತ್ತು. ಕಂಬಳ ಕ್ಷೇತ್ರದಲ್ಲಿ ಹಲವು ವರ್ಷಗಳ ಹಿಂದೆ ಸ್ಪರ್ಧೆಯಿಂದ ನಿವೃತ್ತಿ ಪಡೆದಿದ್ದರೂ, ಪಾಂಡುಗೆ ಕಂಬಳಾಭಿಮಾನಿಗಳಲ್ಲಿ ಇದ್ದ ಜನಪ್ರಿಯತೆ ಮಾತ್ರ ಕಡಿಮೆಯಾಗಿರಲಿಲ್ಲ.

ಕಂಬಳದ ಕಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಪಾಂಡು ಇದೀಗ ಇಹಲೋಕ ತ್ಯಜಿಸಿರುವುದು ಕಂಬಳ ಕ್ಷೇತ್ರದ ಅಭಿಮಾನಿಗಳಿಗೆ ಹಾಗೂ ಮಾಲೀಕರಿಗೆ ನೋವುಂಟು ಮಾಡಿದೆ.