Thursday, April 24, 2025
HomeUncategorizedಸುಳ್ಯದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಗಾರ

ಸುಳ್ಯದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಗಾರ

ಸುಳ್ಯ :ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಸುಳ್ಯದ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಒಂದು ದಿನದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವು ಗುರುವಾರ ಯಶಸ್ವಿಯಾಗಿ ನಡೆಯಿತು. ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಸುಮಾರು 400 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರಾರಂಭದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ನಾ ಸೀತಾರಾಮ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದ.ಕ ಘಟಕದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಪ್ರೌಢಶಾಲೆಯ ಮುಖ್ಯಪಾಧ್ಯಾಯರಾದ ಗಿರೀಶ್ ಕುಮಾರ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯವಾದ ಜಯಪ್ರಸಾದ್ ಕಾರಿಂಜೆ ಅಗತ್ಯ ಸಹಕಾರ ನೀಡಿದರು. ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಎಲ್ಲಾ ರೀತಿಯ ಆತಿಥ್ಯ ಮತ್ತು ಅನುಕೂಲಗಳನ್ನು ನೀಡಿದರು.

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡಿನ ಕನ್ನಡಪರ ಹೋರಾಟಗಾರ ಡಾ ವಾಮನ ರಾವ್ ಬೇಕಲ್ ಅವರಿಂದ 2025 ರಲ್ಲಿ ಸ್ಥಾಪನೆಯಾಗಿದೆ. ಈ ಸಂಘಟನೆಯು ಈಗಾಗಲೇ ಮೂರು ಜಿಲ್ಲೆಗಳಲ್ಲಿ ತನ್ನ ಘಟಕಗಳನ್ನು ಸ್ಥಾಪಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮವು ವು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಕ್ರಮ. ಸಂಸ್ಥೆಯು ಇನ್ನೂ ಹಲವು ಕೇಂದ್ರಗಳಲ್ಲಿ ಇಂತಹ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಹೊಂದಿದೆ.

ಸುದ್ದಿ ಕಳಿಸಿದವರು
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು

ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನದ ಪ್ರಾಯೋಗಿಕ ಸೂತ್ರಗಳು, ಯೋಗ ಮತ್ತು ಶಿಸ್ತಿನ ಜೀವನದ ಪ್ರಾಮುಖ್ಯತೆ, ಚಿತ್ರಕಲೆ ಮತ್ತು ವ್ಯಂಗ್ಯ ಚಿತ್ರ ರಚನೆಯ ಪ್ರಾತ್ಯಕ್ಷಿಕೆ ಮತ್ತು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಪ್ರೀತಿಸುವ ಮತ್ತು ಬೆಳೆಸುವ ಕುರಿತು ಸಂಪನ್ಮೂಲ ವಿಶೇಷಜ್ಞರು ಹೆಚ್ಚಿನ ಗಮನ ಹರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕ ಮತ್ತು ಪತ್ರಕರ್ತ ಜಯಾನಂದ ಪೆರಾಜೆ, ಶಿಕ್ಷಕಿ ಡಾ ಶಾಂತ ಪುತ್ತೂರು, ವ್ಯಂಗ್ಯ ಚಿತ್ರಕಾರ ವಿರಾಜ್ ಅಡೂರ್ ಮತ್ತು ಕನ್ನಡ ಪರಿಚಾರಕ ಡಾ ಕೊಳ್ಚಪ್ಪೆ ಗೋವಿಂದ ಭಟ್ ವಿದ್ಯಾರ್ಥಿಗಳನ್ನು ಆಯ್ದ ವಿಷಯಗಳಲ್ಲಿ ತೊಡಗಿಸಿಕೊಂಡರು.

RELATED ARTICLES
- Advertisment -
Google search engine

Most Popular