ಭಾರತದಲ್ಲಿ 3 ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಫೋನ್ ಬಿಡುಗಡೆ

0
193

ಬೆಂಗಳೂರು : ಮೊಬೈಲ್ ಮಾರುಕಟ್ಟೆ ಇಂದು ವಿಶಾಲವಾಗಿ ಬೆಳೆದುಕೊಂಡಿದೆ. ಫೋನ್ ಇಲ್ಲಿದೆ ಇರುವ ಜನರು ಯಾರೂ ಇಲ್ಲದಂತಾಗಿದೆ. ಕಾಲಕಾಲಕ್ಕೆ ಈ ಫೋನ್​ನಲ್ಲಿ ಸಾಕಷ್ಟು ಬದಲಾವಣೆ ಕೂಡ ಆಗುತ್ತಿರುತ್ತವೆ. ಇಂದು ಲಭ್ಯವಿರುವ ಹೆಚ್ಚಿನ ಮೊಬೈಲ್ ಫೋನ್‌ಗಳು ಅಥವಾ ಸ್ಮಾರ್ಟ್‌ ಪೋನ್‌ಗಳು ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿವೆ. ಆದರೆ ಈಗ ಅಂತಹದ್ದೇ ಒಂದು ಫೋನ್ ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಿದ್ದು, ವಿಶೇಷ ಎಂದರೆ ಇದರಲ್ಲಿ 3 ಸಿಮ್ ಕಾರ್ಡ್‌ಗಳನ್ನು ಬಳಸಬಹುದು. ಈ ಫೋನ್ ಅನ್ನು ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಐಟೆಲ್ ಬಿಡುಗಡೆ ಮಾಡಿದೆ. ಆ ಫೋನಿನ ಹೆಸರು ಐಟೆಲ್ ಕಿಂಗ್ ಸಿಗ್ನಲ್.

ನೀವು ಕೇವಲ ಕರೆಗಾಗಿ ಅಗ್ಗದ ಮತ್ತು ಬಾಳಿಕೆ ಬರುವ ಫೀಚರ್ ಫೋನ್ ಖರೀದಿಸಲು ಬಯಸಿದರೆ ಈ ಐಟೆಲ್ ಕಿಂಗ್ ಸಿಗ್ನಲ್ ಖರೀದಿಸಬಹುದು. ಈ ಫೋನಿನಲ್ಲಿ ನೆಟ್‌ವರ್ಕ್ ಸಂಪರ್ಕಕ್ಕಾಗಿ ಕಂಪನಿಯು ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿದೆ. ಐಟೆಲ್‌ನ ಈ ಫೋನ್ ಕಡಿಮೆ ನೆಟ್‌ವರ್ಕ್ ಕವರೇಜ್‌ನಲ್ಲಿ ಶೇ. 510 ದೀರ್ಘ ಕರೆ ಅವಧಿಯನ್ನು ಮತ್ತು ಇತರ ಬ್ರಾಂಡ್‌ಗಳಿಗಿಂತ ಶೇ. 62 ರಷ್ಟು ವೇಗದ ಸಂಪರ್ಕವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಐಟೆಲ್ ಕಿಂಗ್ ಸಿಗ್ನಲ್ ಬೆಲೆ

ಐಟೆಲ್ ಕಿಂಗ್ ಸಿಗ್ನಲ್ ಅನ್ನು ಕಂಪನಿಯು 1399 ರೂ. ಗಳಿಗೆ ಬಿಡುಗಡೆ ಮಾಡಿದೆ. ಕಂಪನಿಯು ಇದನ್ನು ಆರ್ಮಿ ಗ್ರೀನ್, ಕಪ್ಪು ಮತ್ತು ನೇರಳೆ ಕೆಂಪು ಸೇರಿದಂತೆ ಹಲವು ಬಣ್ಣಗಳಲ್ಲಿ ಅನಾವರಣ ಮಾಡಿದೆ. ಈ ಫೀಚರ್ ಫೋನ್‌ನಲ್ಲಿ ಕಂಪನಿಯು ಗ್ರಾಹಕರಿಗೆ 13 ತಿಂಗಳ ಖಾತರಿಯನ್ನು ನೀಡುತ್ತಿದೆ.

ಟೆಲ್ ಕಿಂಗ್ ಸಿಗ್ನಲ್ ನ ಫೀಚರ್ಸ್

ಐಟೆಲ್ ಕಿಂಗ್ ಸಿಗ್ನಲ್ ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 2 ಇಂಚಿನ ಡಿಸ್ಪ್ಲೇ ಹೊಂದಿದೆ. ಕಂಪನಿಯು ಇದರಲ್ಲಿ 1500mAh ದೊಡ್ಡ ಬ್ಯಾಟರಿಯನ್ನು ಒದಗಿಸಿದೆ. ವಿಶೇಷವೆಂದರೆ ಐಟೆಲ್ ತನ್ನಲ್ಲಿ ಚಾರ್ಜ್ ಮಾಡಲು ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಅನ್ನು ಒದಗಿಸಿದೆ. ಐಟೆಲ್‌ನ ಈ ಫೀಚರ್ ಫೋನ್ ಸೂಪರ್ ಬ್ಯಾಟರಿ ಮೋಡ್ ಅನ್ನು ಕೂಡ ಬೆಂಬಲಿಸುತ್ತದೆ. ಕಂಪನಿಯು ಈ ಫೋನಿನ ಹಿಂಭಾಗದಲ್ಲಿ VGA ಕ್ಯಾಮೆರಾವನ್ನು ಒದಗಿಸಿದೆ. ಈ ಫೋನ್‌ನಲ್ಲಿ ಕಂಪನಿಯು ಟಾರ್ಚ್, ಆಟೋ ಕಾಲ್ ರೆಕಾರ್ಡಿಂಗ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಿದೆ. ನೀವು ಮೈಕ್ರೋ SD ಕಾರ್ಡ್ ಮೂಲಕ ಇದರ ಸಂಗ್ರಹಣೆಯನ್ನು 32GB ವರೆಗೆ ಹೆಚ್ಚಿಸಬಹುದು.

ಈ ಫೋನ್ ವೈರ್‌ಲೆಸ್ FM (ರೆಕಾರ್ಡಿಂಗ್) ಅನ್ನು ಬೆಂಬಲಿಸುತ್ತದೆ. ಫೋನ್ ಬೆಳ್ಳಿ ಲೇಪಿತವಾಗಿದೆ. ಈ ಫೋನಿನಲ್ಲಿ ಟಾರ್ಚ್, ಆಟೋ ಕಾಲ್ ರೆಕಾರ್ಡಿಂಗ್, ಫೋನ್‌ಬುಕ್/ ಮೆಸೇಜ್​ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇದು 2000 ಕಾಂಟೆಕ್ಟ್ ಅನ್ನು ಬೆಂಬಲಿಸುತ್ತದೆ. ಈ ಫೋನ್‌ನಲ್ಲಿ ಮ್ಯೂಸಿಕ್ ಪ್ಲೇಯರ್ ಮತ್ತು ವಿಡಿಯೋ ಪ್ಲೇಯರ್ ಕೂಡ ಲಭ್ಯವಿದೆ.

LEAVE A REPLY

Please enter your comment!
Please enter your name here