ಆಂಬ್ಯುಲೆನ್ಸ್ ಸೇವೆಗೆ ನೆರವಿನ ಹೆಜ್ಜೆ
ಕಾಪು : ಸರ್ವೇಶ್ವರ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಮೂಳೂರು ವತಿಯಿಂದ ಸಾರ್ವಜನಿಕ ಸೇವೆಯ ಉದ್ದೇಶದಿಂದ ಆಂಬ್ಯುಲೆನ್ಸ್ ಸೇವೆಗಾಗಿ ನಿಧಿ ಸಂಗ್ರಹಿಸುವ ಸಲುವಾಗಿ ಗಣೇಶ ಚತುರ್ಥಿಯ ಪ್ರಯುಕ್ತ “ಪಿಲಿ ಏಸ 2026” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವು ಸೆಪ್ಟೆಂಬರ್ 16ರಂದು ಮೂಳೂರಿನ ಸಾಯಿರಾಧ ಬೀಚ್ ರೆಸಾರ್ಟ್ ಪಾರ್ಕಿಂಗ್ ಗ್ರೌಂಡ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ನಿಧಿಯನ್ನು ಆಂಬ್ಯುಲೆನ್ಸ್ ಸೇವೆಯ ಉದ್ದೇಶಕ್ಕೆ ಬಳಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

