ಬಂಟ್ವಾಳ : ಇಲ್ಲಿನ ವಗ್ಗ ಸಮೀಪದ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ನಡೆದ ನವರಾತ್ರಿ ಪೂಜೆ ಮತ್ತು ರಂಗಪೂಜೆ ಬಳಿಕ ಭಜನಾ ಮಂಡಳಿ ಸದಸ್ಯರಿಗೆ ‘ಭಜನಾ ಸಮವಸ್ತ್ರ ವಿತರಿಸಲಾಯಿತು.

ಇದೇ ವೇಳೆ ದಾನಿಗಳ ನೆರವಿನಲ್ಲಿ ನಾಗಸನ್ನಿಧಿ ಬಳಿ ನಿರ್ಮಾಣಗೊಳ್ಳುತ್ತಿರುವ ಭೋಜನಾಲಯಕ್ಕೆ ಶೀಟು ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ದೇವಳದ ಆಡಳಿತ ಧರ್ಮದರ್ಶಿ ಕೆ. ಎಸ್. ಪಂಡಿತ್, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ, ಸಿದ್ಧಾಪುರ ನೀರಾವರಿ ಇಲಾಖೆ ಎಂಜಿನಿಯರ್ ಜಯರಾಮ್ ಕೈತ್ರೋಡಿ, ಭಜನಾ ಮಂಡಳಿ ಪದಾಧಿಕಾರಿಗಳು ಮತ್ತಿತರರು ಇದ್ದರು.

