ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಬೋಳಂತೂರು ಗ್ರಾಮ ಪಂಚಾಯತಿನ ಸಹಕಾರದೊಂದಿಗೆ ಗಿಡ ನಾಟಿ ಕಾರ್ಯಕ್ರಮ

0
7

ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ವಿಟ್ಲ ಇದರ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಬೋನಂತೂರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನಾಟಿ ಕಾರ್ಯಕ್ರಮವು ಬೋಳಂತೂರು ಗ್ರಾಮದ ಬೀರುಕೋಡಿ ಹಿಂದು ರುದ್ರ ಭೂಮಿಯಲ್ಲಿ ಜೂನ್ 5 ಶುಕ್ರವಾರ ನಡೆಸಲಾಯಿತು.

ಹಣ್ಣಿನ ಗಿಡ ನಾಟಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಎ ರುಕ್ಮಯ ಪೂಜಾರಿ ಮಾತನಾಡಿ ನಾಟಿ ಮಾಡಿದ ಗಿಡಗಳ ಪೋಷಣೆ ಬಹಳ ಮುಖ್ಯ, ಈ ದೃಷ್ಟಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳು ಮಾದರಿಯಾಗಿದ್ದು, ಮೋಕ್ಷದಾಮದ ಸುತ್ತಮುತ್ತಲು ನೆಟ್ಟ ಹಣ್ಣು ಹಂಪಲಿನ ಗಿಡಗಳಿಂದಾಗಿ ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗುವಂತಾಗಿ ಇದೊಂದು ಸುಂದರ ಧಾಮವಾಗಲಿ ಎಂದರು.

ಕಾರ್ಯಕ್ರಮದಲ್ಲಿ ಹಿಂದೂ ರುದ್ರ ಭೂಮಿ ಅಧ್ಯಕ್ಷರಾದ ಚಂದ್ರಶೇಖರ ರೈ, ಜನಜಾಗೃತಿ ವೇದಿಕೆಯ ಕಲ್ಲಡ್ಕ ವಲಯ ಅಧ್ಯಕ್ಷರಾದ ಬಟ್ಯಪ್ಪ ಶೆಟ್ಟಿ, ಭಜನಾ ಪರಿಷತ್ತಿನ ಕಲ್ಲಡ್ಕ ವಲಯ ಅಧ್ಯಕ್ಷರಾದ ಜಯರಾಮ್ ರೈ, ಪಂಚಾಯತ್ ಕಾರ್ಯದರ್ಶಿ ಅಶ್ರಫ್, ಕಲ್ಲಡ್ಕ ವಲಯ ವಲಯ ಅಧ್ಯಕ್ಷೆ ತುಳಸಿ, ಬೋಳಂತೂರು ಒಕ್ಕೂಟ ಅಧ್ಯಕ್ಷೆ ಸೀತಾ ,ಕಲ್ಲಡ್ಕ ವಲಯ ಮೇಲ್ವಿಚಾರಕ ಶುಕರಾಜ್,ಹಿಂದೂ ರುದ್ರ ಭೂಮಿ ಸಮಿತಿ ಸದಸ್ಯರು ಜಿ, ಎನ್ ನೊಣಯ್ಯ ಮತ್ತು ವಿಶ್ವನಾಥ ಶೆಟ್ಟಿ, ಶೌರ್ಯ ವಿಪತ್ತು ಸಮಿತಿ ಯ ಸಂಯೋಜಕಿ ವಿದ್ಯಾ, ಶೌರ್ಯ ಘಟಕದ ನಿಯೋಜಿತ ಅಧ್ಯಕ್ಷ ಗಣೇಶ್, ಸದಸ್ಯರಾದ ರವಿಚಂದ್ರ, ಚಿನ್ನಾ ಕಲ್ಲಡ್ಕ, ಒಕ್ಕೂಟ ಸೇವಾಪ್ರತಿನಿಧಿ ಲೀಲಾವತಿ, ಒಕ್ಕೂಟ ದ ಪದಾಧಿಕಾರಿಗಳು,
ಸಂಘ ದ ಸದಸ್ಯರು, ಸಂಜೀವಿನಿ ಒಕ್ಕೂಟ ದ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here