ಪೂರ್ಣಿಮಾ ಪೇಜಾವರ ಅವರಿಗೆ ವನಜಾಕ್ಷಿಯಮ್ಮ ಟ್ರಸ್ಟ್ ನಿಂದ ಸನ್ಮಾನ

0
23

ಮೂಡುಬಿದಿರೆ: ಹಿರಿಯ ತಾಳಮದ್ದಳೆ ಅರ್ಥಧಾರಿ ಪೂರ್ಣಿಮಾ ಪೇಜಾವರ ಅವರಿಗೆ ವನಜಾಕ್ಷಿಯಮ್ಮ ಚಾರಿಟೇಬಲ್ ಟ್ರಸ್ಟಿನ 2026ನೇ ಸಾಲಿನ ಸನ್ಮಾನ ನೀಡಿ ಗೌರವಿಸಲಾಯಿತು.

ಇಲ್ಲಿನ ಪ್ರೀತಂ ಗಾರ್ಡನ್ ಸಭಾಭವನದಲ್ಲಿ ನಡೆದ ಯಕ್ಷದೇವ ಮಿತ್ರ ಕಲಾ ಮಂಡಳಿಯ 29ನೇ ಯಕ್ಷ ಸಂಭ್ರಮದ ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ಕೆ. ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪೂರ್ಣಿಮಾ ಪೇಜಾವರ ಅವರನ್ನು ಗೌರವಿಸಲಾಯಿತು.

ವನಜಾಕ್ಷಿ ಅಮ್ಮ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ದೀಪ್ತಿ ಬಾಲಕೃಷ್ಣ ಸನ್ಮಾನಪತ್ರ ವಾಚಿಸಿದರು. ಟ್ರಸ್ಟಿಗಳಾದ ಬಲರಾಮ ಜೆ.ಎಸ್., ಬಾಲಕೃಷ್ಣ ಭಟ್, ಅಲಕಾ ಬಲರಾಮ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ ಎಂ., ಎಂ. ದೇವಾನಂದ ಭಟ್, ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಬೊಕ್ಕಸ ಚಂದ್ರಶೇಖರ ರಾವ್, ರವಿಪ್ರಸಾದ್ ಕೆ. ಶೆಟ್ಟಿ, ನೆಲ್ಲಿಮಾರ್ ಸಾಶಿವ ರಾವ್ ಮತ್ತಿತರರು ಉಪಸ್ಥಿತರಿದ್ದರು.