ಪೋಸ್ಟ್ ಮ್ಯಾನ್ ಪ್ರಕಾಶ್ ಕೆ. ಸಾಲ್ಯಾನ್‌ರಿಗೆ ಸನ್ಮಾನ

0
13

ಮೂಲ್ಕಿ : ಅಂಚೆಯಣ್ಣನಾಗಿ ಗ್ರಾಮೀಣ ಜನರಿಗೆ ಸಹಕಾರಿಯಾಗಿ ಬಹಳಷ್ಟು ನಿಷ್ಠೆಯಿಂದ ಕೆಲಸ ಮಾಡಿ ತಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆದಿದ್ದಾರೆ. ಅದರಂತೆ ಮೂಲ್ಕಿಯ ಜನರು ಕೂಡ ಇವರ ಕರ್ತವ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇನ್ನು ಕೂಡ ಸಮಾಜ ಸೇವೆಯನ್ನು ಮಾಡಲು ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದು ಪೋಸ್ಟ್ ಮ್ಯಾನ್ ಪ್ರಕಾಶ್ ಕೆ. ಸಾಲ್ಯಾನ್‌ರವರು ಎಲ್ಲರಿಗೂ ಮಾದರಿಯಾಗಿ ಇರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದಡಿ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಚೆ ಇಲಾಖೆಯಲ್ಲಿ 38 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಪೋಸ್ಟ್ ಮ್ಯಾನ್ ಪ್ರಕಾಶ್ ಕೆ. ಸಾಲ್ಯಾನ್ ಚಿತ್ರಾಪು ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.

ಕೇಶವಾನಂದ ಗುರೂಜಿ ಚಿತ್ರಾಪು, ಬಂಕಿನಾಯಕರು, ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ರೋಟರಿ ಕಾರ್ಯದರ್ಶಿ ಭುಜಂಗ ಕವತ್ತಾರು, ಗುರು ನಾರಾಯಣ ಸಂಘ ಕೆ. ಎಸ್.ರಾವ್ ನಗರ ಅಧ್ಯಕ್ಷರು ಮಹಾಬಲ ಸನಿಲ್, ಜಾನ್ ಕ್ವಾಡ್ರಾಸ್, ಅತಿಕಾರಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಮನೋಹರ ಕೋಟ್ಯಾನ್, ವಲೇರಿಯನ್ ರೋಡ್ರಿಗಸ್, ಸುರೇಂದ್ರ ಜಿ ಶೆಣೈ, ನಗರ ಪಂಚಾಯಿತ್ ಮಾಜಿ ಅಧ್ಯಕ್ಷರು ಸರೋಜಿನಿ ಸುವರ್ಣ, ಹೊಸ ಅಂಗಣ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್, ಉಮೇಶ್ ಮಾನಂಪಾಡಿ, ವಾಸು ಪೂಜಾರಿ ಚಿತ್ರಾಪು, ವಿಜಯ ಹರಿಶ್ಚಂದ್ರ ಸಾಲ್ಯಾನ್, ಶ್ವೇತಾ, ಗೀತಾ ಚಿತ್ರಾಪು ಮತ್ತಿತರರು ಉಪಸ್ಥಿತರಿದ್ದರು. ಹರಿಶ್ಚಂಧ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ವಾಸು ಪೂಜಾರಿ ವಂದಿಸಿದರು. ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರೂಪಿಸಿದರು.