ಉಡುಪಿ : ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದಿಂದ ಜೂನ್ ತಿಂಗಳಲ್ಲಿ ಘಟಕದ ಲೇಡಿ ಜೆಸಿ ವಿಂಗ್ಸ ಅಡಿಯಲ್ಲಿ ಶಾಲಾ ಮಕ್ಕಳಿಗೆ ಪ್ರಯಾಸ್ ದಿನ ಆಚರಿಸಿ ಕಾರ್ಯಕ್ರಮ ನಡೆಸಲಾಯಿತು.
ಈ ಪ್ರಯಾಸ್ ದಿನದಂದು 8ನೇ ತರಗತಿ ಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ಮಾಸಿಕ ಋತುಸ್ರಾವದ ಕುರಿತು ಆರೋಗ್ಯ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.
ಈ ಕಾರ್ಯಾಗಾರವನ್ನು ಉಡುಪಿ ಉದ್ಯಾವರದ ಎಂ.ಇ.ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಆಯುರ್ವೇದಿಕ್ ಸ್ತ್ರೀ ರೋಗ ತಜ್ಞರಾದ ಡಾ. ಚಿತ್ರ ನೆಗಳೂರು ನಡೆಸಿಕೊಟ್ಟರು. ವಿದ್ಯಾರ್ಥಿನಿಯರಿಗೆ ಋತುಸ್ರಾವದ ಕುರಿತಾದ ಸ್ವಚ್ಚತೆ, ಪ್ಯಾಡ್ ಬಳಕೆ, ಸಮಸ್ಯೆಗಳಿಗೆ ಪರಿಹಾರ ಮುಂತಾದ ಮಾಹಿತಿಗಳನ್ನು ಮಕ್ಕಳ ಸಂವಾದದ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಘಟಕದ ಮಹಿಳಾ ಪ್ರತಿನಿಧಿ ಜೆಸಿ ಆಶಾ ಪ್ರಶಾಂತ್, ಜೆಸಿ ಸವಿತಾ , ಜೆಜೆಸಿ ಆತ್ಮೀ, ಶಾಲಾ ಮುಖ್ಯೋಪಾಧ್ಯಾಯರಾದ ಸವಿತಾ ಆಚಾರ್ಯ, ಶಿಕ್ಷಕಿಯರಾದ ಶೋಭಾ ಶೆಟ್ಟಿ,ಸುಪ್ರಿತಾ ಹಾಗೂ ಪೂರ್ವಾಧ್ಯಕ್ಷರಾದ ಜೆಸಿ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.

