ಕಾಣಿಯೂರು ಪ್ರಗತಿಯಲ್ಲಿ ಕಡಬ ತಾ| ಮಟ್ಟದ 2ನೇ ತುಳು ಸಮ್ಮೇಳನದ ಪೂರ್ವಭಾವಿ ಸಭೆ

0
18

ಕಾಣಿಯೂರು : ಕಡಬ ತಾಲೂಕು ಮಟ್ಟದ 2ನೇ ತುಳು ಸಮ್ಮೇಳನವು ಡಿ 13ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮವು ಅ 31ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಾಗಿದೆ. ಇದೀಗ ಕಡಬ ತಾಲೂಕು ಮಟ್ಟದ 2ನೇ ತುಳು ಸಮ್ಮೇಳನವನ್ನು ಆಯೋಜನೆ ಮಾಡಲು ಪ್ರಗತಿ ವಿದ್ಯಾಸಂಸ್ಥೆಗೆ ಅವಕಾಶ ಒದಗಿ ಬಂದಿದೆ. ತುಳು ಸಮ್ಮೇಳನವನ್ನು ಹಬ್ಬದ ವಾತಾವರಣದಲ್ಲಿ ಆಚರಿಸುವ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ಸಂಘಟಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ರಾಮಕುಂಜ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ, ಕಡಬ ತಾಲೂಕು ಕಡೀರ ತುಳು ಸಮ್ಮೇಳನಾಧ್ಯಕ್ಷ ಸೇಸಪ್ಪ ರೈ ರಾಮಕುಂಜ ಮಾತನಾಡಿ,
ಪ್ರಥಮ ತುಳು ಸಮ್ಮೇಳನವನ್ನು ನಮ್ಮ ಅಥಿತ್ಯದಲ್ಲಿ ರಾಮಕುಂಜದಲ್ಲಿ ಬಹಳ ಅರ್ಥಪೂರ್ಣವಾಗಿ ತಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಸಿದ್ದೇವೆ. ಇದೀಗ ಎರಡನೇ ತುಳು ಸಮ್ಮೇಳನವು ಕಾಣಿಯೂರಿನಲ್ಲಿ ನಡೆಯುತ್ತಿರುವುದು ನಮಗೆಲ್ಲರಿಗೂ ಸಂತೋಷ. ಇಲ್ಲಿ ಹಲವಾರು ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿ ಅನುಭವ ಉಳ್ಳವರು ಇರುವುದರಿಂದ ಯಶಸ್ವಿಗೊಳ್ಳುವುದರಲ್ಲಿ ಯಾವುದೇ ಸಂಶಯ ಇಲ್ಲ.

ಆದರೆ ಸಂಪನ್ಮೂಲ ಕ್ರೂಢೀಕರಿಸುವ ಸಂದರ್ಭದಲ್ಲಿ ನಾವೆಲ್ಲರೂ ಸಹಕಾರ ನೀಡಬೇಕು. ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಮತ್ತು ಸಹಕಾರಿ ಸಂಘಗಳ ಸಹಕಾರ ಪಡೆಯಬೇಕು. ಕಾರ್ಯಕ್ರಮ ಯಶಸ್ವಿಯಾಗಲು ನಾವೆಲ್ಲ ಸಹಕಾರ ನೀಡೋಣ ಎಂದರು. ಕಡೀರ ತುಳು ಸಮ್ಮೇಳನದ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು ಮಾತನಾಡಿ, ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ ಸಿಗಬೇಕು ಎಂಬುದು ಹಲವು ವರ್ಷದ ಫಲ, ಜೊತೆಗೆ ಕಳೆದ ಪ್ರಥಮ ತುಳು ಸಮ್ಮೇಳನದಲ್ಲಿ ಪೂರಕವಾಗಿ ಬೇಡಿಕೆಯನ್ನು ಇಟ್ಟಿದ್ದು, ಇದೀಗ ಎರಡನೇ ತುಳು ಸಮ್ಮೇಳನದಲ್ಲಿ ಸಂಭ್ರಮಿಸುವ ಅವಕಾಶ ಸಿಕ್ಕಿದೆ ಎಂದರು. ಕಾಣಿಯೂರು ಪಿಂಗಾರ ತುಳುಕೂಟದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಮಾತನಾಡಿ, ತುಳು ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿ, ಬೆಳೆಸುವಲ್ಲಿ ತುಳು ಸಮ್ಮೇಳನಗಳ ಪಾತ್ರ ಅತ್ಯಂತ ದೊಡ್ಡದಾಗಿದ್ದು, ಭಾಷೆ, ಕಲೆ , ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ವೇದಿಕೆಗಳು ಅನಿವಾರ್ಯ. ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿದರೂ ಅದು ಬಹಳ ಯಶಸ್ವಿಯಾಗಿ ನಡೆಯುತ್ತದೆ.

ಈ ನಿಟ್ಟಿನಲ್ಲಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ. ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಿದರೂ ಅದು ಬಹಳ ಯಶಸ್ವಿಯಾಗಿ ನಡೆಯುತ್ತದೆ. ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುವ ನಿಟ್ಟಿನಲ್ಲಿ ಅದನ್ನು ಜೋಡಿಸುವ ಜವಾಬ್ದಾರಿಯೂ ಇದೆ ಎಂದರು. ಸವಣೂರು ಬೊಳ್ಳಿ ಬೊಲ್ಪು ತುಳು ಕೂಟದ ಅಧ್ಯಕ್ಷ ಸತೀಶ್ ಬಲ್ಯಾಯ ಮಾತನಾಡಿ, ಕಾಣಿಯೂರು ಪ್ರಗತಿಯಲ್ಲಿ ನಡೆಯಲಿರುವ ತುಳು ಸಮ್ಮೇಳನವನ್ನು ಅತ್ಯಂತ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರ ಸಹಾಭಾಗೀತ್ವ ಅಗತ್ಯ ಎಂದರು. ಕಾಣಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಾಮೋದರ್, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಸ್ಥಾಪಕಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಭಾರತ ಸರಕಾರ ನಿವೃತ್ತ ಉಪ ಕಾರ್ಯದರ್ಶಿ ಎಂ.ಎನ್ ಗೌಡ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಸದಸ್ಯರಾದ ಉದಯ ರೈ ಮಾದೋಡಿ, ನಾಗೇಶ್ ರೈ ಮಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸವಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಿರಿಶಂಕರ ಸುಲಾಯ ಅವರು ಕಾರ್ಯಕ್ರಮದ ರೂಪುರೇಷೆ ವಿವರಿಸಿದರು. ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ, ಆಂಗ್ಲ ಮಾಧ್ಯಮ ಮುಖ್ಯಗುರು ನಾರಾಯಣ್ ಭಟ್, ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಗೌಡ ರಾಮಕುಂಜ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಪ್ರಮುಖರಾದ ಉಮೇಶ್ ಶೆಟ್ಟಿ ಸಾಯಿರಾಂ, ಸುರೇಶ್ ದೆಂತಾರು, ಚೆನ್ನಕೇಶವ ರೈ ಗುತ್ತುಪಾಲು, ಚಿದಾನಂದ ಉಪಾಧ್ಯಾಯ ಕಲ್ಪಡ, ದಯಾನಂದ, ಹರಿಪ್ರಸಾದ್ ರೈ, ಜಯಂತ ಅಬೀರ, ಪುಟ್ಟಣ್ಣ ಗೌಡ ಮುಗರಂಜ, ಚಂದ್ರಶೇಖರ ಬರೆಪ್ಪಾಡಿ, ಬಾಲಕೃಷ್ಣ ಕೆ, ಅಲೆಕ್ಕಾಡಿ, ಸುಬ್ರಹ್ಮಣ್ಯ ಕೆ.ಎಂ ಕಲ್ಪಡ, ರಮೇಶ್ ಮಾದೋಡಿ, ಸುಧಾಕರ್ ಕಾಣಿಯೂರು, ಪರಮೇಶ್ವರ ಅನಿಲ, ಲಿಂಗಪ್ಪ ಗೌಡ ಅಗಳಿ, ಸವಿತಾ ಕೆ, ಪ್ರತಿಭಾ ಪಿ.ಬಿ, ರಚನಾ, ಸುಚೇತಾ, ಕವಿತಾ ಹೆಚ್. ರೈ, ಸುಷ್ಮಾ ರೈ ಎಚ್, ಪೂರ್ಣಿಮಾ, ಪ್ರೇಮಲತಾ, ರೋಹಿಣಿ ಸುವರ್ಣ ಅಬೀರ, ಮಮತಾ ಅಗಳಿ, ಸರಿತಾ ರಾಮಕುಂಜ, ಪ್ರೇಮಾ ಬಿ, ಮಹೇಶ್ ಕೆ ಸವಣೂರು, ವಿನ್ಯಾಸ್ ಬಂಟ್ರಿಯಾಲ್, ಅಶೋಕ್ ಕುಮಾರ್, ಸಂತೋಷ್ ಕೊಪ್ಪ, ಅನಿತಾ ಜೆ ರೈ, ಹೇಮಾ ನಾಗೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಗತಿ ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮ ಮುಖ್ಯಗುರು ವಿನಯ ವಿ ಶೆಟ್ಟಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.