ಚಾರ ಶಾರದೋತ್ಸವದಲ್ಲಿ ಶಿಕ್ಷಕ ಮಹೇಶ್ ಹೈಕಾಡಿ ಅವರಿಗೆ ಗೌರವ ಸನ್ಮಾನ

0
22

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಚಾರ ವತಿಯಿಂದ ಆಯೋಜಿಸಿದ ಪ್ರಥಮ ವರ್ಷದ ಚಾರ ಶಾರದೋತ್ಸವ- 2026 ಸಂಭ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಚಾರ ಗ್ರಾಮದ ವಿದ್ಯಾನಗರದಲ್ಲಿ ವಾಸ್ತವವಾಗಿರುವ ಮಹೇಶ ಹೈಕಾಡಿ ಇವರಿಗೆ ಶಿಕ್ಷಣ ಕ್ಷೇತ್ರ, ಸಾಹಿತ್ಯ ಮತ್ತು ವಿವಿಧ ಸಂಘ ಸಂಸ್ಥೆಯ ಮೂಲಕ ಮಾಡಿದ ಚಟುವಟಿಕೆಗಳನ್ನು ಗುರುತಿಸಿ ಮತ್ತು 2026 – 27ನೇ ಸಾಲಿನ ಡಾ. ಶಿವರಾಮ ಕಾರಂತ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಇವರನ್ನು ಪ್ರಥಮ ವರ್ಷದ ಚಾರ ಶಾರದೋತ್ಸವ ಸಂಭ್ರಮದಲ್ಲಿ ಸನ್ಮಾನಿಸಲಾಯಿತು.

ಇವರು ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ ಹೈಸ್ಕೂಲು ವಿಭಾಗದ ಉಪ ಮುಖ್ಯೋಪಾಧ್ಯಾಯರಾಗಿ ಕನ್ನಡ ಶಿಕ್ಷಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.