ಮಣಿಪಾಲದ ಶ್ರೀ ಮಿತ್ರ ಯಕ್ಷಗಾನ ಮಂಡಳಿಯ ವತಿಯಿಂದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ “ಯಕ್ಷಮಿತ್ರ ಶ್ರೀ” ರಾಜ್ಯ ಪ್ರಶಸ್ತಿ ಪ್ರಧಾನ

0
33

ದಾವಣಗೆರೆ : ಉಡುಪಿ ಜಿಲ್ಲೆಯ ಮಣಿಪಾಲದ ಸರಳೀಬೆಟ್ಟು ಶ್ರೀ ಮಿತ್ರ ಯಕ್ಷಗಾನ ಮಂಡಳಿಯವತಿಯಿಂದ ಇತ್ತೀಚಿಗೆ ಉಡುಪಿಯ ಶ್ರೀ ಕೃಷ್ಣಮಠದ ಸಭಾಂಗಣದಲ್ಲಿ ದಾವಣಗೆರೆಯ ಕಲಾಕುಂಚ, ಯಕ್ಷರಂಗ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಶ್ರೀ ಮಿತ್ರ ಯಕ್ಷಗಾನ ಮಂಡಳಿಯ 44ನೇ ವಾರ್ಷಿಕೋತ್ಸವದ ಪ್ರಯುಕ್ತ ಪ್ರಯುಕ್ತ ಶಿರೂರು ಮಠದ ಪರ್ಯಾಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು “ಯಕ್ಷಮಿತ್ರಶ್ರೀ” ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಸಂಸ್ಥೆಯ ಅಧ್ಯಕ್ಷರಾದ ಹೆಚ್.ಪ್ರಕಾಶ್ ಶಾನುಭಾಗ್ ತಿಳಿಸಿದ್ದಾರೆ.

ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಕಳೆದ 4 ದಶಕಗಳಿಂದ ಕರಾವಳಿ ಜಿಲ್ಲೆಗಳ ಜಾನಪದ ದೈವೀಕಲೆ ಆರಾಧನೆ ಕಲೆ ಯಕ್ಷಗಾನವನ್ನು ಗುರುತಿಸಿದ ಸಾಧನೆಯನ್ನು ಪರಿಗಣಿಸಿ ಗಂಡುಕಲೆ ಯಕ್ಷಗಾನವನ್ನು ದಾವಣಗೆರೆಗೆ ಮೊಟ್ಟ ಮೊದಲು ಮಹಿಳೆಯರಿಗೆ ಯಕ್ಷಗಾನ ಕಲಿಸಿ, ಮಹಿಳೆಯರು “ಮೋಹಿನಿ ಭಸ್ಮಾಸುರ” ಪ್ರಸಂಗದೊಂದಿಗೆ ಯಕ್ಷಗಾನ ಪ್ರದರ್ಶನವನ್ನು ಯಶಸ್ವಿಗೊಳಿಸಿದ ಗಣೇಶ್ ಶೆಣೈ ಯವರಿಗೆ ಈ ಪ್ರಶಸ್ತಿ ವಿತರಿಸಲಾಯಿತು ಎಂದು ಉಡುಪಿಯ ಪರ್ಯಾಯ ಶ್ರೀಕೃಷ್ಣ ಮಠದ ಶ್ರೀ ಶಿರೂರು ಮಠದ ಶ್ರೀ ಸ್ವಾಮೀಜಿಯವರು ವ್ಯಕ್ತಪಡಿಸಿದರು.

ಸಮಾರಂಭದ ಸಭಾಧ್ಯಕ್ಷತೆಯನ್ನು ಬೆಂಗಳೂರಿನ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮಶೆಟ್ಟಿ ವಹಿಸಿಕೊಂಡರು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಮಸಿತಿ ಸದಸ್ಯರಾದ ಶಿಲ್ಪಾ ಉಮೇಶ್ ಉಪಸ್ಥಿತರಿದ್ದರು. ಕಲಾಕುಂಚದ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿ ಶುಭ ಹಾರೈಸಿದರು.