ಮಾರಿಷಸ್‌ನಲ್ಲಿ ವಿಶ್ವ ವೇದಿಕೆಗೆ ಪುತ್ತಿಗೆ ಶ್ರೀಗಳು ; ಅಧ್ಯಕ್ಷ ಧರಮ್ ಬೀರ್ ಗೋಕುಲ್ ಅವರಿಂದ ಆತ್ಮೀಯ ಸ್ವಾಗತ

0
10

ಮಾರಿಷಸ್ ದೇಶದಲ್ಲಿ ನಡೆಯಲಿರುವ ಮೂರು ದಿನದ ವಿಶ್ವ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಪಾಲ್ಗೊಳ್ಳಲು, ಪೂಜ್ಯ ಶ್ರೀ ಪುತ್ತಿಗೆ ಶ್ರೀಗಳು ಆಗಮಿಸಿದಾಗ, ಮಾರಿಷಸ್ ದೇಶದ ಅಧ್ಯಕ್ಷರಾದ ಧರಮ್ ಬೀರ್ ಗೋಕುಲ್ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಸುಮಾರು ಎಂಬತ್ತಕ್ಕೂ ಅಧಿಕ ದೇಶಗಳಿಂದ ಆಗಮಿಸಿರುವ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳ ನಾಯಕರ ಸಮ್ಮುಖದಲ್ಲಿ ನಾಳೆಯ ದಿನ, ವಿಶ್ವದ ಸಮಕಾಲೀನ ಸವಾಲುಗಳೆನಿಸಿರುವ “ಹವಾಮಾನ ವೈಪರಿತ್ಯ, ಸಂಘರ್ಷ ಮತ್ತು ಋಣಭಾರ” ಎಂಬ ವಿಷಯದಲ್ಲಿ ಪೂಜ್ಯ ಶ್ರೀ ಪುತ್ತಿಗೆ ಶ್ರೀಗಳು ದಿಕ್ಸೂಚಿ ಭಾಷಣದಲ್ಲಿ ಮಾತನಾಡಲಿರುವರು.

LEAVE A REPLY

Please enter your comment!
Please enter your name here