ಉಜಿರೆ : ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಮನೋವಿಜ್ಞಾನ ವಿಭಾಗವು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಭಾರತೀಯ ಶಾಲಾ ಮನೋವಿಜ್ಞಾನ ಸಂಘಟನೆ (Indian School Psychology Association – INSPA) ವತಿಯಿಂದ ಪ್ರದಾನಗೊಳ್ಳುವ ಪ್ರತಿಷ್ಠಿತ **“ಇನ್‌ಸ್ಪಾ ಶೈಕ್ಷಣಿಕ ಉತ್ಕೃಷ್ಟತಾ ಪ್ರಶಸ್ತಿ”**ಗೆ ಭಾಜನವಾಗಿದೆ.
ಚೆನ್ನೈನ ಎನ್.ಕೆ.ಟಿ. ನ್ಯಾಷನಲ್ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ 16ನೇ ‘ಇನ್‌ಸ್ಪಾ’ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಎಸ್.ಡಿ.ಎಂ. ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ಹಾಗೂ ಉಪನ್ಯಾಸಕಿ ಅಶ್ವಿನಿ ಸ್ವೀಕರಿಸಿದರು.
ಮನೋವಿಜ್ಞಾನ ವಿಭಾಗವು ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಮಟ್ಟದ ತರಬೇತಿ, ಸಂಶೋಧನಾ ಸಾಧನೆ, ವಿದ್ಯಾರ್ಥಿಕೇಂದ್ರಿತ ಕಾರ್ಯಕ್ರಮಗಳು, ಸಮಾಜಮುಖಿ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತೋರಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಪ್ರಶಸ್ತಿಯು ಎಸ್.ಡಿ.ಎಂ. ಕಾಲೇಜಿನ ಶೈಕ್ಷಣಿಕ ಶ್ರೇಷ್ಠತೆಗೆ ಮತ್ತೊಂದು ಗರಿ ಮೂಡಿಸಿದ್ದು, ಕಾಲೇಜಿನ ಮನೋವಿಜ್ಞಾನ ವಿಭಾಗವು ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿರುವುದಕ್ಕೆ ಸಾಕ್ಷಿಯಾಗಿದೆ.
ಈ ಮಹತ್ವದ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಡೀನ್, ಪ್ರಾಧ್ಯಾಪಕ ವರ್ಗ ಹಾಗೂ ಸಿಬ್ಬಂದಿ ಡಾ. ವಂದನಾ ಜೈನ್, ಉಪನ್ಯಾಸಕಿ ಅಶ್ವಿನಿ ಹಾಗೂ ಮನೋವಿಜ್ಞಾನ ವಿಭಾಗದ ಎಲ್ಲಾ ಬೋಧಕ ವೃಂದವನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.

