ಮಣಿಪಾಲ : JCI ಪರ್ಕಳದ ಪೂರ್ವಾಧ್ಯಕ್ಷರಾದ JFD ಸಂದೀಪ್ ನಾಯ್ಕ್ ಅವರಿಗೆ JCI ಭಾರತ ವಲಯ 15ರ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ – “ಮೃದಿನಿ 2026” ರ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ಸಾಧನಶ್ರೀ ಪ್ರಶಸ್ತಿ ಲಭಿಸಿದೆ.
JCI ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸೇವೆ, ನಾಯಕತ್ವ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸಂದೀಪ್ ನಾಯ್ಕ್ ಅವರು JCI ಪರ್ಕಳದ ಪೂರ್ವಾಧ್ಯಕ್ಷರಾಗಿ ಸಂಸ್ಥೆಯ ವಿವಿಧ ಚಟುವಟಿಕೆಗಳಿಗೆ ಸಕ್ರಿಯವಾಗಿ ಕೊಡುಗೆ ನೀಡಿದ್ದು, ಸದಸ್ಯರನ್ನು ಪ್ರೋತ್ಸಾಹಿಸುವುದು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರತಿಷ್ಠಿತ ಸಾಧನಶ್ರೀ ಪ್ರಶಸ್ತಿಗೆ ಭಾಜನರಾದ JFD ಸಂದೀಪ್ ನಾಯ್ಕ್ ಅವರನ್ನು JCI ಪರ್ಕಳದ ಅಧ್ಯಕ್ಷರು, ಪೂರ್ವಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದಿಸಿ, ಅವರ ಮುಂದಿನ ಸೇವಾ ಪಯಣಕ್ಕೆ ಶುಭ ಹಾರೈಸಿದ್ದಾರೆ.

