ಪ್ರಿಯಾ ಎಂ ಸುಳ್ಯರವರ ತೃತೀಯ ನುಡಿ ಮುತ್ತುಗಳ ಹಾರ ಅಹನಿ ಪ್ರಿಯಾ ಬಿಡುಗಡೆ

0
27

ಪುತ್ತೂರು : ದಿನಾಂಕ :12.04.2026 ರಂದು ಚಿಗುರೆಲೆ ಸಾಹಿತ್ಯ ಬಳಗದ ವಾರ್ಷಿಕೋತ್ಸವ ಪಂಚ ಕೃತಿ ಲೋಕಾರ್ಪಣೆ ಸದ್ಭಾವ ಚಿಗುರು ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ವೈವಿಧ್ಯ ಚಿಗುರೆಲೆ ಸಾಹಿತ್ಯ ಬಳಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಸಹಕಾರದಲ್ಲಿ, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಆಶ್ರಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಯುವ ಕವಯತ್ರಿ ಪ್ರಿಯಾ ಎಂ ಸುಳ್ಯ ರವರ ಅಹನಿ ಪ್ರಿಯಾ ನುಡಿ ಮುತ್ತುಗಳ ಹಾರ ಕೃತಿಯನ್ನು ಕರ್ನಾಟಕ ಸಾಹಿತ್ಯ ಸಂಭ್ರಮವೇದಿಕೆ ಮೂಡಿಗೆರೆ ರಾಜ್ಯಾಧ್ಯಕ್ಷರಾದ ಶ್ರೀ ಎಂ ಎಸ್ ನಾಗರಾಜ್ ಮೂಡಿಗೆರೆ ಲೋಕಾರ್ಪಣೆಗೊಳಿಸಿದರು. ಸಮಾರಂಭದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಸಂಚಾಲಕರಾದ ಶ್ರೀ ಗೋಕುಲ್ ನಾಥ್ ಪಿ ವಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಶ್ರೀ ಬಾಲಕೃಷ್ಣ ಕಾರಂತ್ ಅಳಿಕೆ, ಶ್ರೀ ಮಹಾಲಿಂಗೇಶ್ವರ ಭಟ್ ಮಧುವನ, ಶಶಿಕಲಾ ವರ್ಕಾಡಿ, ಸುಲೋಚನಾ ಪಿ ಕೆ, ಶ್ರೀ ರಮೇಶ್ ಉಳಯ, ಪತ್ರಕರ್ತರಾದ ಉದಯ್ ಕುಮಾರ್ ಯು.ಎಲ್,ಶ್ರೀ ಮಂಜು ಬೆಂಗಳೂರು, ರಾಜಮ್ಮ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here