ಮಂಗಳೂರಿನಲ್ಲಿ ಜ.2ರಂದು ಪ್ರೊ ಪಾತ್ ಅಕಾಡೆಮಿಯ 8ನೇ ರಾಜ್ಯಮಟ್ಟದ ಅಬಾಕಸ್, 7ನೇ ವೇದ ಗಣಿತ ಸ್ಪರ್ಧೆ

0
10

ರಾಜ್ಯದ ವಿದ್ಯಾರ್ಥಿಗಳಿಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ; ಡಿ.10 ನೋಂದಣಿಗೆ ಕೊನೆಯ ದಿನ

ಮಂಗಳೂರು: ವಿದ್ಯಾರ್ಥಿಗಳಲ್ಲಿ ಗಣಿತದ ಆಸಕ್ತಿ, ಲೆಕ್ಕಾಚಾರದ ವೇಗ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಪ್ರೊ ಪಾತ್ ಅಕಾಡೆಮಿ (Pro Path Academy) ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನ 8ನೇ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ ಹಾಗೂ 7ನೇ ರಾಜ್ಯಮಟ್ಟದ ವೇದ ಗಣಿತ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ರಾಜ್ಯಮಟ್ಟದ ಮುಕ್ತ ಸ್ಪರ್ಧೆಯು 2027ರ ಜನವರಿ 2ರಂದು ಮಂಗಳೂರಿನ ಹಂಪನಕಟ್ಟೆಯ ಕುದ್ಮುಲ್ ರಂಗರಾವ್ ಪುರಭವನ (ಟೌನ್‌ಹಾಲ್)ದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳಿಂದ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ಮಕ್ಕಳಲ್ಲಿರುವ ಗಣಿತದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಲೆಕ್ಕಾಚಾರದ ವೇಗ ಮತ್ತು ನಿಖರತೆಯನ್ನು ಹೆಚ್ಚಿಸುವುದು ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ. ಅಬಾಕಸ್ ಹಾಗೂ ವೇದ ಗಣಿತದ ಅಭ್ಯಾಸದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸ್ಮರಣಶಕ್ತಿ, ಆತ್ಮವಿಶ್ವಾಸ ಮತ್ತು ತಾರ್ಕಿಕವಾಗಿ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಲು ಈ ಸ್ಪರ್ಧೆ ಸಹಕಾರಿಯಾಗಲಿದೆ.

ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಾತ್ಮಕ ಅನುಭವ ಪಡೆಯಲು ಇದೊಂದು ಉತ್ತಮ ವೇದಿಕೆಯಾಗಲಿದೆ.

ಸ್ಪರ್ಧೆಯ ಅರ್ಹತೆ ಮತ್ತು ನೋಂದಣಿ ವಿವರಗಳು:

  • ಅಬಾಕಸ್ ಸ್ಪರ್ಧೆ: 5 ವರ್ಷ ಮೇಲ್ಪಟ್ಟು 11 ವರ್ಷದೊಳಗಿನ ವಿದ್ಯಾರ್ಥಿಗಳಿಗೆ.
  • ವೇದ ಗಣಿತ ಸ್ಪರ್ಧೆ: 12 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ.
  • ದಿನಾಂಕ: ಜನವರಿ 2, 2027 (ಶನಿವಾರ).
  • ಸ್ಥಳ: ಕುದ್ಮುಲ್ ರಂಗರಾವ್ ಪುರಭವನ (ಟೌನ್‌ಹಾಲ್), ಹಂಪನಕಟ್ಟೆ, ಮಂಗಳೂರು.
  • ನೋಂದಣಿಗೆ ಕೊನೆಯ ದಿನಾಂಕ: ಡಿಸೆಂಬರ್ 10, 2026.
  • ಸಂಪರ್ಕ ಸಂಖ್ಯೆ: 9606960011.

ವಿದ್ಯಾರ್ಥಿಗಳು, ಪೋಷಕರು, ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಶಿವಮೊಗ್ಗದ ಪ್ರೊ ಪಾತ್ ಅಕಾಡೆಮಿ ಮನವಿ ಮಾಡಿದೆ.