ಮೂಡುಬಿದಿರೆ ತಾಲೂಕು ಗ್ರಾಮ ಅಭಿವೃದ್ಧಿ ಸೇವಾ ಪ್ರತಿನಿಧಿಗಳ ಪ್ರಗತಿ ಪರಿಶೀಲನ ಸಭೆ

0
98

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ಮೂಡುಬಿದಿರೆ ತಾಲೂಕಿನ ಎಲ್ಲಾ ಗ್ರಾಮಗಳ ಸೇವಾ ಪ್ರತಿನಿಧಿಗಳ ಪ್ರಗತಿ ಪರಿಶೀಲನ ಸಭೆ ಸೆಪ್ಟೆಂಬರ್ 10ರಂದು ಸಮಾಜ ಮಂದಿರದಲ್ಲಿ ನಡೆಯಿತು.

ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅವರು ದೀಪ ಬೆಳಗಿ ಸಭೆಯನ್ನು ಉದ್ಘಾಟಿಸಿ ಪ್ರತಿ ಗ್ರಾಮಗಳ ಪ್ರಗತಿ ಪರಿಶೀಲನೆಯ ಮಾಹಿತಿ ಪಡೆದರು. ದ ಕ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಅವರು ಇತರ ಮಾಹಿತಿಗಳನ್ನು ಪಡೆದುಕೊಂಡರು. ವೇದಿಕೆಯಲ್ಲಿ ರಿಕವರಿ ಯೋಜನಾಧಿಕಾರಿ ಆನಂದ, ಧನಂಜಯ ಬಿ ಹಾಜರಿದ್ದರು. ಲೆಕ್ಕ ಪರಿವೀಕ್ಷಕ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. 
ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here