ಗ್ರಾಹಕರಿಗೆ ಉತ್ತಮ ಪಾರದರ್ಶಕ ಸತತ ಸೇವೆಯೇ ಧ್ಯೇಯ-ಅಗರಿ ರಾಘವೇಂದ್ರ ರಾವ್

0
5

ಮೂಡುಬಿದರೆ: ಅತ್ಯಂತ ಗರಿಷ್ಠ ರಿಯಾಯಿತಿಯನ್ನು ನೀಡುವುದರೊಂದಿಗೆ ಗ್ರಾಹಕರ ತೊಂದರೆಗಳಿಗೆ ತಕ್ಷಣ ಸ್ಪಂಧಿಸಿ ಸುಸಜ್ಜಿತ ಉಪಕರಣಗಳನ್ನು ನೀಡುತ್ತಿದೆ. ಆನ್ಲೈನ್ ವ್ಯವಹಾರಕ್ಕೆ ಸರಿಸಾಟಿಯಾಗಿ ಬೆಳೆಯುತ್ತಿದ್ದು ಎಲ್ಲರ ಚಿರಪರಿಚಿತ ಸಂಸ್ಥೆಯಾಗಿ ಹೊರಹೊಮ್ಮಿದೆ. ಉತ್ತಮ ಸೇವೆಯೊಂದಿಗೆ ಪಾರದರ್ಶಕ ವ್ಯವಹಾರದಿಂದಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಿರ್ತಾಡಿ ಪ್ರತಿರೂಪ ಸ್ಟುಡಿಯೋದ ಹರೀಶ್ ದೇವಾಡಿಗ, ಅಶ್ವತ್ಥಪುರ ದೇವಾಲಯದ ಆಡಳಿತ ಮುಕ್ತೇಸರ ರಘುನಾಥ ಭಟ್, ಆರ್.ಕೆ.ನ್ಯೂಸ್ ನ ರಾಯಿ ರಾಜ ಕುಮಾರ್, ವೈಬ್ರೆಂಟ್ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ ರಾಜೇ ಅರಸ್, ಕಡಂದಲೆ ತುಕ್ರಪ್ಪ ಕೆಂಬಾರೆ ನುಡಿದರು. ಅಲ್ಲದೆ ಸಿಬ್ಬಂದಿ ವರ್ಗದವರ ಸಹಕಾರದಿಂದಾಗಿ ಎಲ್ಲವನ್ನೂ ಕೂಡ ಸಾಧಿಸಲು ಸಾಧ್ಯ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರೀತಿ ಮಿಕ್ಸಿ ಕಂಪೆನಿಯ ಹಿರಿಯ ಮಾರಾಟ ನಿರ್ವಾಹಕ ಹರೀಶ್ ಕುಮಾರ್ ನೂತನ ಮಿಕ್ಸಿ ಜೋಡಿಯಾಕ್ ಅನ್ನು ಅನಾವರಣ ಗೊಳಿಸಿ ಅದರ ವಿಶೇಷತೆಗಳನ್ನು ತಿಳಿಸಿದರು.
ಅಗರಿ ಹಬ್ಬಗಳ ಉತ್ಸವದ ಪ್ರತಿದಿನ ಒಂದು ಬಹುಮಾನ ಹತ್ತನೇ ಹಂತದ 7ನೇ ಡ್ರಾ ವಿಜೇತರಾದ ಶ್ರೀಮತಿ ದೇವಕಿ, ಶಿವಾನಂದ ಸುವರ್ಣ, ಗುಲಾಬಿ, ಮಾರ್ಚ್ ಫೆರ್ನಾಂಡಿಸ್, ಅಶಿರ್, ಸುನಿಲ್, ವೀಣಾ ಪೂಂಜ ಇವರುಗಳಿಗೆ ಬಹುಮಾನಿತ ವಸ್ತುಗಳನ್ನು ಅತಿಥಿಗಳು ನೀಡಿದರು. ಅಲ್ಲದೆ ಹತ್ತನೇ ಹಂತದ ಎಂಟನೇ ಡ್ರಾವನ್ನು ಕೂಡ ಅತಿಥಿಗಳು ಚೀಟಿ ಎತ್ತುವ ಮೂಲಕ ಸಾಂಗಗೊಳಿಸಿದರು. ವಾಯ್ಸ್ ಆಫ್ ಆರಾಧನಾ ತಂಡದ ವಿಜೇತರಾದ ನಿಹಾಲ್ ಮೂಡುಬಿದರೆ ಮತ್ತು ಅಪೂರ್ವ ಪೂಜಾರಿ ಮಾರ್ನಾಡು ಅವರುಗಳಿಗೆ ವಿಶೇಷ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.
ವೇದಿಕೆಯಲ್ಲಿ ಸಿದ್ಧಕಟ್ಟೆ ಈಗಲ್ ಸೋಲಾರ್ ನ ಶ್ರೀನಿವಾಸಗೌಡ, ಹುಲ್ಸೆ ಫ್ಯಾಶನ್ ನ ಸಂದೀಪ್ ಜೈನ್, ಹಾಜರಿದ್ದರು.
ಅಗರಿ ಎಂಟರ್ಪ್ರೈಸಸ್ ಮಾಲಕ ರಾಘವೇಂದ್ರ ರಾವ್ ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಅಗರಿ ಬೆಳೆದು ಬಂದ ಬಗೆಯನ್ನು ತಿಳಿಸಿ ಕಳೆದ 26 ವರ್ಷದಿಂದ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಗ್ರಾಹಕರಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕೋವಿಡ್ ತರುವಾಯ 8 ಶಾಖೆಗಳನ್ನು ತೆರೆದು ಕಂಪನಿಯಿಂದ ಬಂದ ವಿಶೇಷ ಪ್ರೋತ್ಸಾಹದಲ್ಲಿ ಬಹುಮಾನಗಳನ್ನು ಪ್ರಾಯೋಜಿಸಿ ಎಲ್ಲರನ್ನು ತೃಪ್ತಿಪಡಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ರಫೀಜ್ ಕಾರ್ಯಕ್ರಮ ನಿರ್ವಹಿಸಿದರು. ಅಗರಿ ವಾದಿರಾಜರಾವ್ ವಂದಿಸಿದರು.