ಜಿಲ್ಲೆಯಾದ್ಯಂತದ ರಸ್ತೆಗಳ ಮೇಲೆ ಡೀಸೆಲ್ ಮತ್ತು ಆಯಿಲ್ ಪದಾರ್ಥಗಳು ಬಿದ್ದಿರುವ ಕಾರಣ ಪ್ರಾರಂಭದ ಮಳೆಗೆ ರಸ್ತೆಯು ವಿಪರೀತವಾಗಿ ಜಾರುವ ಸಂಭವವಿದ್ದು ಅಪಘಾತಗಳು, ಜೀವ ಹಾನಿ ಸಂಭವನೀಯ ಆಗಿದೆ. ಆದುದರಿಂದ ಎಲ್ಲಾ ಚಾಲಕರು ಬಹಳ ಜಾಗರೂಕತೆಯಿಂದ ವಾಹನವನ್ನು ಚಲಾಯಿಸಬೇಕು.
ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಪ್ರತಿ ವಿದ್ಯಾರ್ಥಿನಿಯರಲ್ಲಿ ಸೌಜನ್ಯದಿಂದ ನಡೆದುಕೊಂಡು ದೂರುಗಳಿಗೆ ಆಸ್ಪದಗಳಿಲ್ಲದಂತೆ ಸಹಕರಿಸಬೇಕು. ಪ್ರತಿಯೊಬ್ಬ ನಿರ್ವಾಹಕರು ಕಂಪ್ಯೂಟರೈಸ್ಡ್ ಟಿಕೆಟ್ ನೀಡ ಬೇಕು. ಬಸ್ಸಿನ ಬಾಗಿಲಲ್ಲಿ ನಿಲ್ಲಲು ಯಾರಿಗೂ ಅವಕಾಶವಿಲ್ಲ. ಕರ್ಕಶ ಹಾರ್ನಗಳನ್ನು ಬಳಸಬಾರದು. ಬಸ್ಸಿನಲ್ಲಿ ಧ್ವನಿವರ್ಧಕ ಸಂಪೂರ್ಣ ನಿಷೇಧ. ಬಸ್ಸು ನಿಲ್ದಾಣ ಬಿಟ್ಟು ಬೇರೆ ಪ್ರದೇಶಗಳಲ್ಲಿ ಪ್ರಯಾಣಿಕರನ್ನು ಹತ್ತಿಸುವುದು ಹಾಗೂ ಇಳಿಸುವುದು ನಿಷೇಧಿಸಲಾಗಿದೆ.
ಚಾಲಕರು ಹಾಗೂ ನಿರ್ವಾಹಕರಿಗೆ ಸಮವಸ್ತ್ರ ಕಡ್ಡಾಯ. ಕರ್ತವ್ಯದಲ್ಲಿರುವಾಗ ಮೊಬೈಲ್ ಫೋನ್ ನಿಷೇಧ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಮೀಸಲಾದ ಸೀಟನ್ನು ಕಾದಿರಿಸಬೇಕು. ಬಸ್ಸಿನ ಎಲ್ಲ ದಾಖಲಾತಿಗಳು, ರೂಟ್ ಪರ್ಮಿಟ್ ಇತ್ಯಾದಿ ಅಗತ್ಯ ಇರಲೇಬೇಕು. ಯಾವುದೇ ಬಸ್ಸುಗಳ ಮಧ್ಯೆ ಮೇಲಾಟ, ಜಗಳ ನಿಷೇಧಿಸಿದೆ.
ಬಸ್ಸಿನ ಮಾಲಕರುಗಳು ಚಾಲಕರು ಹಾಗೂ ನಿರ್ವಾಹಕರನ್ನು ಸಮರ್ಪಕ ರೀತಿಯಲ್ಲಿ ತರಬೇತುಗೊಳಿಸಿ ಕರ್ತವ್ಯಕ್ಕೆ ಕಳುಹಿಸಬೇಕು ಎನ್ನುವ ಮನವಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪಾಡಿ ಪ್ರಕಟಿಸಿದರು.
ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರುಗಡೆ ಬಿಜೈ ಕಡೆಗೆ ಹೋಗುವ ಬಸ್ ಬೇ, ಸಾರ್ವಜನಿಕರಿಗೆ ನಿಲ್ಲಲು ಬಸ್ ಸ್ಟ್ಯಾಂಡ್ ಇರುವದಿಲ್ಲ. ಕೆ ಪಿ ಟಿ ಸರ್ಕಲ್ ನಿಂದ, ನಂತೂರಿನಿಂದ ಫ್ರೀ ಲೆಫ್ಟ್ ಇಲ್ಲದೆ ಇರುವುದು ಸಂಚಾರ ಅವ್ಯವಸ್ಥೆಗೆ ಕಾರಣವಾಗಿದೆ. ಸಾಧ್ಯವಿರುವಡೆಗಳಲ್ಲಿ ಫ್ರೀ ಲೆಫ್ಟ್ ಅವಕಾಶವನ್ನು ನೀಡಬೇಕು. ಅಗತ್ಯ ಇರುವಡೆಗಳಲ್ಲಿ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಆಗಬೇಕು. ಕೆಪಿಟಿ ಮತ್ತು ಸಂತೂರುಗಳ ಮಧ್ಯೆ ಫ್ಲೈ ಓವರ್, ಅಂಡರ್ ಪಾಸ್ ಅಗತ್ಯಗಳಿವೆ. ಕುಂಟಿಕಾನ ಜಂಕ್ಷನ್, ಲಾಲ್ ಬಾಗ್, pvs, ಬಂಡ್ಸೋ ಹಾಸ್ಟೆಲ್ ಜಂಕ್ಷನ್ ಗಳಲ್ಲಿ ಒತ್ತಡವನ್ನು ಕಡಿಮೆಗೊಳಿಸಲು ಪ್ರಯತ್ನಿಸಬೇಕು.
ಕರಾವಳಿ ಸರ್ಕಲ್ ನಿಂದ ಅಂಬೇಡ್ಕರ್ ಸರ್ಕಲ್ ಆಗಿ ಹಂಪನ ಕಟ್ಟೆಯವರೆಗೂ ಎರಡು ಕಡೆಗಳಲ್ಲಿ ಮತ್ತು ಕಂಕನಾಡಿ ರಸ್ತೆಯಿಂದ ಪಳ್ನೀರು ರಸ್ತೆಗಳಲ್ಲಿ ಎರಡು ಕಡೆ ಲಘು ವಾಹನಗಳು ಪಾರ್ಕಿಂಗ್ ಮಾಡುತ್ತಿರುವುದರಿಂದ ಬಸ್ಸುಗಳಿಗೆ ಸಂಚರಿಸಲು ಕಷ್ಟಕರವಾಗಿದೆ ಎಂಬಿತ್ಯಾದಿ ಹಲವಾರು ತೊಂದರೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕೆಂದು ಪೊಲೀಸ್ ವ್ಯವಸ್ಥೆಯನ್ನು ಈ ಮೂಲಕ ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಮಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಕೋಶಾಧಿಕಾರಿ ಜೋಯಲ್ ದಿಲ್ ರಾಜ್ ಫೆರ್ನಾಂಡಿಸ್, ರಾಜೇಶ್ ಹಾಜರಿದ್ದರು.
ವರದಿ ರಾಯಿ ರಾಜ ಕುಮಾರ
.

