ಕೇರಳ ರಾಜ್ಯ- ಕಾಸರಗೋಡು ಜಿಲ್ಲಾ ಕನ್ನಡ ಸಂಘಟನೆಗಳ ವಿಳಾಸದ ಡೈರೆಕ್ಟರಿ ಪ್ರಕಟಣೆ

0
11

ಕೇರಳ ರಾಜ್ಯದ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ತನ್ನ 36ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ ಕೇರಳ ರಾಜ್ಯ ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಸಂಘಟನೆಗಳ ವಿಳಾಸ ಡೈರೆಕ್ಟರಿಯ 2ನೇ ಪರಿಷ್ಕೃತ ಆವೃತ್ತಿ ಪ್ರಕಟಿಸಲು ಮುಂದಾಗಿದೆ.

ಈ ಡೈರೆಕ್ಟರಿಯಲ್ಲಿ ಕೇರಳದ ವಿವಿಧ ಜಿಲ್ಲೆಗಳು ಹಾಗೂ ಕಾಸರಗೋಡು ಜಿಲ್ಲೆಯಲ್ಲಿರುವ ಸುಮಾರು 500ಕ್ಕೂ ಹೆಚ್ಚು ಕನ್ನಡ ಸಂಘ-ಸಂಸ್ಥೆಗಳು, ವಿವಿಧ ಉಪಭಾಷೆಗಳ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಗಳು, ಸಾರ್ವಜನಿಕ ಸ್ವಯಂಸೇವಾ ಸಂಸ್ಥೆಗಳು, ಸುಮಾರು 500 ಭಜನಾ ಸಂಘಗಳು, ಭಜನಾ ಮಂಡಳಿಗಳು ಹಾಗೂ ಭಜನಾ ಮಂದಿರಗಳು, ಜೊತೆಗೆ ಸುಮಾರು 200 ಸರ್ಕಾರಿ ಮತ್ತು ಖಾಸಗಿ ಕನ್ನಡ ಶಾಲೆಗಳು ಹಾಗೂ ಕಾಲೇಜುಗಳ ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸಲಾಗುತ್ತದೆ.

ಸಂಸ್ಥೆಗಳು ತಮ್ಮ ಸಂಸ್ಥೆಯ ಹೆಸರು, ಪೂರ್ಣ ವಿಳಾಸ, ಮೊಬೈಲ್ ಹಾಗೂ ವಾಟ್ಸ್ಆ್ಯಪ್ ಸಂಖ್ಯೆ, ಇ-ಮೇಲ್ ವಿಳಾಸ, ಸ್ಥಾಪನೆಯಾದ ವರ್ಷ, ನೋಂದಣಿ ಸಂಖ್ಯೆ ಹಾಗೂ ಇತರ ಸಂಕ್ಷಿಪ್ತ ಮಾಹಿತಿಯೊಂದಿಗೆ, ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಇತರ ಪದಾಧಿಕಾರಿಗಳ ಹೆಸರು ಹಾಗೂ ಮನೆ ವಿಳಾಸವನ್ನು ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಪ್ರತ್ಯೇಕವಾಗಿ ಬರೆದು ಕಳುಹಿಸುವಂತೆ ಮನವಿ ಮಾಡಲಾಗಿದೆ.

ಎಲ್ಲಾ ಮಾಹಿತಿಯನ್ನು 2026ರ ಆಗಸ್ಟ್ 30ರೊಳಗೆ ಅಂಚೆ ಮೂಲಕ ಕಳುಹಿಸುವಂತೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ತಿಳಿಸಿದೆ.

ಸಂಪರ್ಕ ವಿಳಾಸ:

ಶಿವರಾಮ ಕಾಸರಗೋಡು
ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.)
ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ,
ಕಾಸರಗೋಡು – 671121

ಮೊಬೈಲ್: 9448572016 / 9901951965
ಇ-ಮೇಲ್: Shivaramakasaragod@gmail.com