ಪಿಯುಸಿ ಫಲಿತಾಂಶ : ಎಪಿಎಸ್ ಶಿಕ್ಷಣ ಸಂಸ್ಥೆಯಿಂದ ಉನ್ನತ ಸಾಧನೆ

0
46

ಬೆಂಗಳೂರು: ಎಪಿಎಸ್ ಶಿಕ್ಷಣ ಸಂಸ್ಥೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ್ದು, ಮೂರು ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿದ್ದಾರೆ.

98% ರಷ್ಟು ಅಂಕ ಗಳಿಸಿರುವ ಎಸ್. ಹರ್ಷ 12 ನೇ ರ‍್ಯಾಂಕ್ ಮತ್ತು ಮೇಘನ 12 ನೇ ರ‍್ಯಾಂಕ್, ಹಾಗೂ 97% ರಷ್ಟು ಅಂಕ ಪಡೆದ ನಿಸರ್ಗ 15 ನೇ ರ‍್ಯಾಂಕ್ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಅತ್ಯಧಿಕ ಅಂಕ ಗಳಿಸಿದವರು ಬಹುತೇಕ ಮಂದಿ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಬಹುಪಾಲು ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, ಅನೇಕ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ (85% ಮತ್ತು ಅದಕ್ಕಿಂತ ಹೆಚ್ಚು) ಫಲಿತಾಂಶ ದಾಖಲಿಸಿದ್ದಾರೆ. ಆಟೋ ಚಾಲಕರು, ಅಡುಗೆ ಮಾಡುವ ಮತ್ತು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡವರ ಕುಟುಂಬದವರ ಮಕ್ಕಳ ಸಾಧನೆ ಶ್ಲಾಘನೀಯ ಎಂದು ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ ಹೇಳಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಸೋಮನಹಳ್ಳಿಯ ಅನಂತ ಗಂಗೋತ್ರಿ ಕ್ಯಾಂಪಸ್ ನಲ್ಲಿ 99%, ಎಪಿಎಸ್ ಆಕ್ಸಿಯಂನಲ್ಲಿ 100% ಫಲಿತಾಂಶ ಮತ್ತು ಎಪಿಎಸ್ ಪಿಯು ಕಾಲೇಜಿನಲ್ಲಿ 96% ಫಲಿತಾಂಶ ದಾಖಲಾಗಿದೆ. ಎಲ್ಲರನ್ನೂ ಒಳಗೊಳ್ಳುವ ಮತ್ತು ಪರಿವರ್ತನಾಶೀಲ ಶಿಕ್ಷಣ ನೀಡುವಲ್ಲಿ ಎಪಿಎಸ್ ಮುಂಚೂಣಿಯಲ್ಲಿದೆ ಎಂದರು.

LEAVE A REPLY

Please enter your comment!
Please enter your name here