ಪುಷ್ಪ ಪ್ರಸಾದ್ ಉಡುಪಿ ಇವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ

0
6

ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ, ಕಾಸರಗೋಡು ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಆಯೋಜಿಸಿದ್ದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2026ರ ಪ್ರಶಸ್ತಿಯನ್ನು ನೀಡಲಾಯಿತು. ದಿನಾಂಕ 18 ಅಕ್ಟೋಬರ್ 2026ರಂದು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀಮತಿ ಪುಷ್ಪ ಪ್ರಸಾದ್ ಇವರ ಸಾಹಿತ್ಯ ಕ್ಷೇತ್ರದ ಸಮಗ್ರ ಸಾಧನೆಯನ್ನು ಗುರುತಿಸಿ ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದುವರೆಗೆ ಕವನಗಳು, ಕಥೆ, ಲೇಖನ ಸೇರಿದಂತೆ ಪುಷ್ಪ ಪ್ರಸಾದ್ ರವರ 9 ಕೃತಿಗಳು ಬಿಡುಗಡೆಗೊಂಡಿರುತ್ತವೆ. ಪ್ರಸ್ತುತ ಇವರು ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಇದೇ ಸಮಯದಲ್ಲಿ ಸುಮಾರು 40-50 ಮಂದಿಯಿಂದ ಕವಿಗೋಷ್ಠಿ ನಡೆಯಿತು. ಡಾ. ಜಯಪ್ಪ ಹೊನ್ನಾಳಿ, ಕನ್ನಡ ಭವನ ಸ್ಥಾಪಕರಾದ .ಡಾ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಕನ್ನಡ ಭವನ ಪ್ರಮುಖರಾದ ವಸಂತ್ ಕೆರೆಮನೆ, ಪ್ರದೀಪ್ ಬೇಕಲ್, ಡಾ. ಕೆ.ಎನ್ ವೆಂಕಟರಮಣ ಹೊಳ್ಳ, ಚು. ಸಾ. ಪ.ಸ್ಥಾಪಕ ಎಂಜಿಆರ್ ಅರಸ್, ಇರಾ ನೇಮು ಪೂಜಾರಿ, ಜಯಾನಂದ ಪೆರಾಜೆ, ಕಥಾಬಿಂದು ಪ್ರಕಾಶನ ಪಿ.ವಿ. ಪ್ರದೀಪ್ ಕುಮಾರ್‌, ಕೊಳ್ಚಪ್ಪೆ ಗೋವಿಂದ ಭಟ್, ಮತ್ತಿತರರು ಉಪಸ್ಥಿತರಿದ್ದರು.