ಸಂತೋಷದ ಮನಸ್ಥಿಯ ಸೃಷ್ಠಿಯೇ ಭಗವದ್ಗೀತೆಯ ಮೂಲ ಉದ್ದೇಶ : ಕೇಮಾರು ಈಶದಾಸ ಸ್ವಾಮೀಜಿ

0
8

ಇಂದಿನ ಅವಸರದ ಜೀವನದಲ್ಲಿ ನಾವೆಲ್ಲಾ ಸಂತೋಷದಿಂದ ಇರುವುದನ್ನೇ ಮರೆತಿದ್ದೇವೆ. ಭಗವದ್ಗೀತೆ ನಮಗೆ ನಿರ್ಲಿಪ್ತ ಮನಸ್ಸಿನ ಸಂತೋಷವನ್ನು ನೀಡುತ್ತದೆ. ದಿನಕ್ಕೊಂದು ಶ್ಲೋಕವನ್ನಾದರೂ ಮನೆಯಲ್ಲಿ ಪಠನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ತುಳು ಭಾಷೆಯ ಭಗವದ್ಗೀತೆಯನ್ನು ಬಿಡುಗಡೆಗೊಳಿಸುತ್ತಿರುವುದಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತದೆ. ಮಾತೃಭಾಷೆಯಲ್ಲಿ ಓದುವ ಸಾಹಿತ್ಯ ಹೃದಯದಲ್ಲಿ ತಳ ನಿಲ್ಲುತ್ತದೆ ಎಂದರು.

ನಿಟ್ಟೆ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಸತೀಶ್ ಕುಮಾರ್ ಭಂಡಾರಿ ಮಾತಾಡಿ ಇಸ್ಕಾನ್ ಸಂಸ್ಥೆಯ ಒಡನಾಟ ಅದರ ಆರಂಭದ ದಿನಗಳಿಂದಲೂ ಇತ್ತು .ಆದರೆ ಇವತ್ತು ಅವರು ತುಳುವಿನಲ್ಲಿ ಭಗವದ್ಗೀತೆ ಮಾಡಿ ಮತ್ತಷ್ಟು ಹತ್ತಿರವಾಗಿದ್ದಾರೆ. ಇದಕ್ಕಾಗಿ ಶ್ರಮಿಸಿದವರಿಗೆಲ್ಲಾ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶುಭ ಹಾರೈಸಿದರು.

ವಿಶ್ವ ತುಳು ಸಂಘಟಕ ಅಬುಧಾಬಿಯ ಸರ್ವೋತ್ತಮ ಶೆಟ್ಟಿಯವರು ಮಾತನಾಡಿ ಈ ತುಳು ಭಗವದ್ಗೀತೆಯ ಉಗಮದ ಹಾದಿಯ ಬಗ್ಗೆ ಮಾತನಾಡುತ್ತಾ ಇಸ್ಕಾನ್ ಸಂಸ್ಥೆಯ ಶ್ರೀ.ಪ್ರಸಾದೇಶ್ವರ ಕೃಷ್ಣದಾಸರು ಭಗವದ್ಗೀತೆಯ ಪ್ರವಚನವನ್ನು ವಿಶ್ವದಾದ್ಯಂತ ನಡೆಸುವ ಬಗ್ಗೆ ವಿಚಾರಿಸಿದಾಗ ಐಲೇಸಾ ಸಂಸ್ಥೆಯನ್ನು ಸೂಚಿಸಿದೆ.ಅವರು ಏಳುದಿನಗಳ ಕಾಲ ದಿನಾ 200-250 ಜನರನ್ನು ಸೇರಿಸಿ ಅದ್ಭುತವಾಗಿ ನಡೆಸಿಕೊಟ್ಟರು. ಆ ಸಂದರ್ಭದಲ್ಲಿ ತುಳು ಭಗವದ್ಗೀತೆ ವಿಶ್ವದಾದ್ಯಂತ ಸಿಗುವಂತೆ ಪ್ರಕಟಿಸಲು ಕೇಳಿದೆವು.ಆದರೆ ಇಷ್ಟುಬೇಗ ಆ ದಿನ ಬರಬಹುದು ಎಂದು ಯೋಚಿಸಿರಲಿಲ್ಲ. ಇದಕ್ಕಾಗಿ ಇಸ್ಕಾನ್ BBT ಸಂಸ್ಥೆಯನ್ನು ಅಭಿನಂದಿಸುತ್ತೇನೆ.ವಿಶ್ವದ ಎಲ್ಲಾ ತುಳುವರನ್ನು ಮನ ಒಲಿಸಿ ಒಂದು ಲಕ್ಷ ಪ್ರತಿಗಳನ್ನು ಮಾರಾಟ‌ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ಕೊಟ್ಟರು.

ಶಾಸಕ ಉಮಾನಾಥ ಕೋಟ್ಯಾನ್ ಇಂದಿನ ಪರಿಸ್ಥಿತಿಯಲ್ಲಿ ಭಗವದ್ಗೀತೆಯ ಅಧ್ಯಯನ ಮತ್ತು ಮನನ ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ ಇಸ್ಕಾನ್ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದು ಹೇಳಿದರು.

ನಿಟ್ಟೆ ತುಳು ಅಧ್ಯಯನ ಪೀಠದ ಡಾ. ಸಾಯಿಗೀತಾ ಮಾತನಾಡಿ ಈ ಹಿಂದೆಯೂ ತುಳು ಭಗವದ್ಗೀತೆಯ ಪ್ರಯತ್ನ ನಡೆದಿದ್ದರೂ ವಿಶ್ವ ಮಟ್ಟದಲ್ಲಿ ಮತ್ತು ಇಸ್ಕಾನ್ ನಂತಹ ಸಂಸ್ಥೆ ಜೊತೆಗೂಡಿರುವುದು ತುಳುವಿನ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆ ಎಂದು ಹೇಳಿದರು.
ಇಸ್ಕಾನ್ ಸಂಸ್ಥೆಯ ಸದಸ್ಯರು ತುಳುವಿನಲ್ಲೆ ಕಾರ್ಯಕ್ರಮ ನಿರೂಪಿಸಿದ್ದು ವಿಶೇಷವಾಗಿತ್ತು. ಇಸ್ಕಾನ್ ಮಂಗಳೂರು ಇದರ ಮುಖ್ಯ ಪ್ರವಾಚಕರಾದ ನಾಮನಿಷ್ಠ ದಾಸ ಸ್ವಾಮೀಜಿ ತುಳು ಬರುವುದಿಲ್ಲವಾದರೂ ಈ ತುಳು ಭಗವದ್ಗೀತೆಯ ಕಾರ್ಯಕ್ರಮದ ಭಾಗವಾಗಲು ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ಅನುವಾದ ಕ್ಷೇತ್ರದಲ್ಲಿ ಸಹಕರಿಸಿದ
ರವಿತೇಜ ಗೌರಂಗದಾಸ್
ಮುಂಬೈಯ ಚಂದ್ರಾವತಿ ಪೂಜಾರಿ, ಬೆಂಗಳೂರಿನ ಕೃಷ್ಣದಾಸ ರೈ ರೂಪಕಲಾ ಆಳ್ವ , ಯಶೋದಾ ಮೋಹನ್ ಮತ್ತು
ಐಲೇಸಾದ ಶಾಂತಾರಾಮ್ ಶೆಟ್ಟಿ, ಗೋಪಾಲ್ ಪಟ್ಟೆ ,ಅನಂತ್ ರಾವ್, ಪಳ್ಳಿ ವಿಶ್ವನಾಥ್ ಶೆಟ್ಟಿ ಇವರನ್ನು ಗೌರವಿಸಲಾಯಿತು. ಪ್ರಸಾದೇಶ್ವರ ಕೃಷ್ಣದಾಸರು ಎಲ್ಲರ ಪರಿಚಯ ಮಾಡಿ ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಿದರು.ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.