Thursday, May 1, 2025
Homeಪುತ್ತೂರುಪುತ್ತೂರು: ಅಖಿಲಾ ನೆಕ್ರಾಜೆ ಅವರಿಗೆ ಸನ್ಮಾನ

ಪುತ್ತೂರು: ಅಖಿಲಾ ನೆಕ್ರಾಜೆ ಅವರಿಗೆ ಸನ್ಮಾನ

ಪುತ್ತೂರು: ಅಖಿಲಾ ನೆಕ್ರಾಜೆ ಇವರಿಗೆ ಚಿತೆಶ್ ಮ್ಯೂಸಿಕ್ ಬಳಗ ಆಯೋಜಿಸಿದ ಕರೋಕೆ ಗಾಯನ ಸ್ಪರ್ಧೆ ಸೀಸನ್ 3 ಇದರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ಪೆರುಮಳ್ ಲಕ್ಷ್ಮಣ್, ಆರ್ ಪಿ ಕಲಾ ಸೇವಾ ಟ್ರಸ್ಟ್‌ ಇದರ ಸಂಚಾಲಕರು ಅದಾ ರವಿ ಪಾಂಬಾರು, ರಂಗಭೂಮಿ ಕಲಾವಿದರಾದ ರಾಜೇಶ್ ಎಲ್ಕನಾ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಅಕಿಲಾ ಇವರ ತಂದೆ ಶೀನಪ್ಪ ಶೆಟ್ಟಿ ತಾಯಿ ಚಂದ್ರಾವತಿ ಇವರ ಸುಪುತ್ರಿ ಪುಪ್ಪಾಡಿ ಗ್ರಾಮ ಕಡಬ ತಾಲೂಕು ಶಿಕ್ಷಣ: ಎಂ ಎಸ್ ಸಿ ಇನ್ ಮೈಕ್ರೋ ಬಯಾಲಜಿ 2024ರಲ್ಲಿ ಮೈಸೂರಿನಲ್ಲಿ ಮುಗಿಸಿರುತ್ತಾರೆ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯ‌ರ್ ಪರೀಕ್ಷೆ ಮುಗಿಸಿ ಸೀನಿಯ‌ರ್ ಪಾಠಗಳನ್ನು ವಿದುಷಿ ಪಾರ್ವತಿ ಗಣೇಶ್ ಭಟ್ ಇವರ ಬಳಿ ವ್ಯಾಸಂಗ ಮಾಡುತ್ತಿರುತ್ತಾರೆ, ಹಾಗೆಯೇ ಐದು ವರ್ಷ ಸುಗಮ ಸಂಗೀತವನ್ನು ಡಾಕ್ಟರ್ ಕಿರಣ್ ಕುಮಾ‌ರ್ ಗಾನಸಿರಿ ಇವರ ಬಳಿ ಕಲಿತಿರುತ್ತಾರೆ. ಬಾಲ್ಯದಿಂದಲೇ ಸಂಗೀತವನ್ನು ಕಲಿಯಲು ಆರಂಭಿಸಿದ ಇವರು ಸಾವಿರಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಲೆಯನ್ನು ಪ್ರದರ್ಶಿಸಿ ಗುರು ಹಿರಿಯರ ಮೆಚ್ಚುಗೆಗೆ ಪಾತ್ರಳಾಗಿರುತ್ತಾರೆ ಹಾಗೆಯೇ ಪ್ರತಿಭಾ ಕಾರಂಜಿ ರಿಯಾಲಿಟಿ ಶೋ ಗಳಂತಹ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೂರಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ
ಅಂತ‌ರ್ ರಾಜ್ಯ ದಲ್ಲೂ ಹೋಗಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಪ್ರಸ್ತುತ ಇವರು ಸುಗಮ ಸಂಗೀತವನ್ನು ನನ್ನ ಗ್ರಾಮದ ಮಕ್ಕಳಿಗೆ ಹೇಳಿಕೊಡುತ್ತ ಹಾಗೆಯೇ ಕಳೆದ ಎರಡು ವರ್ಷಗಳಿಂದ ಅಂದರೆ ಇವರ 22ನೇ ವಯಸ್ಸಿನಿಂದಲೇ ಇವರು ವಿದೇಶದಲ್ಲಿ ಇರುವ ಮಕ್ಕಳಿಗೆ ಸುಗಮ ಸಂಗೀತವನ್ನು ಕಲಿಸುತ್ತಿದ್ದರೆ

ಹೆಸರಾಂತ ಕವಿಗಳು ಬರೆದ 50 ಕ್ಕೂ ಹೆಚ್ಚು ಹಾಡುಗಳಿಗೆ ಹಿನ್ನೆಲೆ ಗಾಯನ ಮಾಡಿರುತ್ತಾರೆ
ಸಂಗೀತದ ಜೊತೆ ಚಿತ್ರಕಲೆ, ನೃತ್ಯ, ನಾಟಕ ಗಳಲ್ಲಿಯೂ ಪರಿಣಿತಿಯನ್ನು ಹೊಂದಿದ್ದು ತಮ್ಮ ಗ್ರಾಮದ ಮಕ್ಕಳಲ್ಲಿನ ಸಂಗೀತ ಪ್ರತಿಭೆಯನ್ನು ಗುರುತಿಸಿ, ಅವರೂ ಕೂಡ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ನಿಟ್ಟಿನಲ್ಲಿ ಸಂಗೀತ ಅಭ್ಯಾಸವನ್ನು ತನ್ನ ಊರಿನಲ್ಲಿಯೇ ಮಾಡಿಕೊಂಡಿರುತ್ತಾರೆ
ಇವರ ಪ್ರತಿಭೆ ಸಾಧನೆಯನ್ನು ಗುರುತಿಸಿ ಇವರಿಗೆ ಐವಾರ್ನಾಡು ಕರೋಕೆ ಗಾಯನ ಸ್ಪರ್ಧೆಯಲ್ಲಿ ಚಿತೆಸ್ ಮ್ಯೂಸಿಕ್ ಬಳಗದ ಅಧ್ಯಕ್ಷರು ಅದಾ ಪೆರುಮಳ್ ಲಕ್ಷ್ಮಣ್‌ ಇವರು ಗೌರವ ಸನ್ಮಾನ ಮಾಡಿರುತ್ತಾರೆ
ಅಖಿಲಾ ನೆಕ್ರಾಜೆ ಇವರಿಗೆ ಐವಾರ್ನಾಡು ಕರೋಕೆ ಗಾಯನ ಸ್ಪರ್ಧೆಯಲ್ಲಿ ಸನ್ಮಾನ
ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ “ನನ್ನ ಹಾಡು ನನ್ನದು” ಕರೋಕೆ ಸಂಗೀತ ಕಾರ್ಯಕ್ರಮ 30 ಮಾರ್ಚ್ 2025ರಂದು ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯ ಮಡ್ತಿಲ ಪುರುಷೋತ್ತಮ ಸ್ಮಾರಕ ರಂಗಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು.

RELATED ARTICLES
- Advertisment -
Google search engine

Most Popular