ರಾಜ್ಯೋತ್ಸವ ಆಚರಣೆ

0
20

ಲಿಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಗೋಳಿ ಇಲ್ಲಿ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಇದರ ಸಹಯೋಗದೊಂದಿಗೆ 71ನೇ ಕನ್ನಡ ರಾಜ್ಯೋತ್ಸವವನ್ನು ನ 1ರಂದು ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿದ್ದ ಲಯನ್ ಸುಧಾಕರ್ ಶೆಟ್ಟಿಗಾರ್ ಅವರು ಕನ್ನಡ ರಾಜ್ಯೋತ್ಸವ ಹಾಗೂ ಲಯನ್ ಸೇವೆಯ ಬಗ್ಗೆ ವಿವರಿಸಿದರು.

ಶಾಲಾ ಮುಖ್ಯಯೊಪಾಧ್ಯಾಕಿಯಾದ ಸಿಸ್ಟೆರ್ ವೆನಿಸ ಅವರು ಮಕ್ಕಳಿಗೆ ಕನ್ನಡ ಭಾಷೆ ಹಾಗೂ ಅದರ ಮಹತ್ವ ಅದಕ್ಕೆ ಸಂದ ಗೌರವ ದ ಬಗ್ಗೆ ವಿವರಿಸಿದರು. ಶಾಲಾ ಅಧ್ಯಾಪಕಿಯರು ಕಾರ್ಯಕ್ರಮ ನಿರೂಪಿಸಿದರು. ಮಕ್ಕಳು ಸ್ವಾಗತ ನೃತ್ಯ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು, ವಂದನಾರ್ಪಣೆ ಹಾಗೂ ಸಿಹಿ ಹಂಚುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಯಿತು.