ಕಟೀಲು: ರಾಮ್ ಫ್ರೆಂಡ್ಸ್ (ರಿ.)ಕಟೀಲ್ ಇದರ 6ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯ ಹಸ್ತ ನಿಧಿ ವಿತರಣೆ ಕಾರ್ಯಕ್ರಮವು ಆ. ೧೦ರಂದು ಬೆಳಗ್ಗೆ 9-೦೦ಗಂಟೆಗೆ
ಬಂಟ್ವಾಳದ ಅರಳ ಸ್ನೇಹ ಭಾರತಿ ವಿದ್ಯಾ ಸಂಸ್ಥೆ (ರಿ.) ಗುಡ್ಡೆಯಂಗಡಿ ನಮ್ಮ ಹಿರಿಯರ ಮನೆ “ಆಶ್ರಮ” ಇಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಉದ್ಯಮಿಗಳಾದ ಶಿವರಾಮ ಕೋಟ್ಯಾನ್ ಪೆರ್ಮುದೆ, ರಂಜಿತ್ ಪೂಜಾರಿ ತೋಡಾರು, ರಾಜೇಶ್ ಅಮೀನ್ ಪೊರ್ಕೋಡಿ, ಪ್ರಶಾಂತ್ ಕುಮಾರ್ ಕಾನಾ, ರಾಮನ ಗೌಡ ಸಿ. ಗ್ವಾತಗಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ರಾಮ್ ಫ್ರೆಂಡ್ಸ್ ನ ಸಂಸ್ಥಾಪಕ ರಮಾನಂದ ಪೂಜಾರಿ ಕಟೀಲ್, ಅಧ್ಯಕ್ಷ ಸುವರ್ಣ ಬಡಗಮಿಜಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಮನಸುಗಳ ಕೂಡುವಿಕೆಯ ಯುವ ತಂಡವು 6ನೇ ವರುಷವನ್ನು ಪೂರೈಸಿ ಏಳನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಸೇವಾ ಬಂಧುಗಳನ್ನು ಪ್ರೀತಿಯಿಂದ ಆಹ್ವಾನಿಸುತಿದ್ದೇವೆ ಎಂದು ತಿಳಿಸಿದ್ದಾರೆ.

