ಹಿರಿಯ ರಂಗಭೂಮಿ ಕಲಾವಿದ, ಚಿತ್ರನಟ ಚಿ. ರಮೇಶ್ ಕಲ್ಲಡ್ಕ ನಿಧನ

0
333

ಬಂಟ್ವಾಳ: ಕಲ್ಲಡ್ಕ ಕೊಳಕೀರು ನಿವಾಸಿ, ಹಿರಿಯ ರಂಗಭೂಮಿ ಕಲಾವಿದ, ಚಿತ್ರನಟ ಚಿ. ರಮೇಶ್ ಕಲ್ಲಡ್ಕ (68) ಅವರು ಇಂದು ಜು.23ರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.

ಕಳೆದ ಹಲವು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಅವರು ಮಂಗಳೂರಿನ ಹೆಸರಾಂತ ನಾಟಕ ತಂಡ ಕಲಾಸಂಗಮದಲ್ಲಿ ಕಳೆದ 20 ವರ್ಷಗಳಿಂದ ಹತ್ತಾರು ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು.
ತುಳು ರಂಗಭೂಮಿಯಲ್ಲಿ ಹೊಸ ಇತಿಹಾಸ ಬರೆದ ಶಿವಧೂತೆ ಗುಳಿಗೆ ನಾಟಕದಲ್ಲಿ ಭೀಮಾರಾವ್ ಪಾತ್ರದಲ್ಲಿ ಮಿಂಚುತ್ತಿದ್ದರು. ಉಳಿದಂತೆ ಒರಿಯರ್ದೊರಿ ಅಸಲ್, ಮದಿಮೆ, ಕುಟುಂಬ, ಶಿವಾಜಿ ಮೊದಲಾದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕಲ್ಲಡ್ಕ ಶಾರದೋತ್ಸವ, ಸರಕಾರಿ ಶಾಲೆಯ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು.

LEAVE A REPLY

Please enter your comment!
Please enter your name here