ಮೂಡುಬಿದಿರೆ: ರಾಮ ಕ್ಷತ್ರಿಯ ಯುವ ವೃಂದ, ಮೂಡುಬಿದಿರೆ ವತಿಯಿಂದ ಜೂನ್ 8, 2025 ರ ಭಾನುವಾರ ಶ್ರೀ ಮಹಾಮ್ಮಾಯಿ ದೇವಸ್ಥಾನ, ಕಲ್ಲಬೆಟ್ಟಿನಲ್ಲಿ ದೇವಾಲಯ ಸ್ವಚ್ಛತಾ ಕಾರ್ಯಕ್ರಮ ಹಾಗೂ ‘ಮನೆ ಮನೆಯಲ್ಲಿ ಗಿಡ’ ಉಚಿತ ಸಸಿ ವಿತರಣಾ ಅಭಿಯಾನವು ಯಶಸ್ವಿಯಾಗಿ ನೆರವೇರಿತು. ಪರಿಸರ ಸಂರಕ್ಷಣೆ ಮತ್ತು ದೇವಾಲಯದ ಶುಚಿತ್ವದ ಮಹತ್ವವನ್ನು ಸಾರಿದ ಈ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿದ್ದರು.
ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ದೇವಸ್ಥಾನದ ಆವರಣ ಮತ್ತು ಸುತ್ತಮುತ್ತಲ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು. ನಂತರ, ಪರಿಸರ ಸ್ನೇಹಿ ಉಪಕ್ರಮವಾಗಿ “ಮನೆ ಮನೆಯಲ್ಲಿ ಗಿಡ” ಅಭಿಯಾನದ ಅಡಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಗಿಡಗಳನ್ನು ವಿತರಿಸಲಾಯಿತು. ತಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವಂತೆ ಹಾಗೂ ಒಂದು ವರ್ಷದ ನಂತರ ಉತ್ತಮವಾಗಿ ಬೆಳೆದ ಗಿಡದ ಫೋಟೋ ಕಳುಹಿಸಿದವರಿಗೆ ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಮ್ಮಾಯಿ ದೇವಸ್ಥಾನ ಸಮಿತಿಯ ಸದಸ್ಯ ಕಮಲಾಕ್ಷ, ರಾಮ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪ್ರೇಮಾನಂದ, ಮಹಿಳಾ ವೃಂದದ ಅಧ್ಯಕ್ಷರಾದ ಶ್ರೀಮತಿ ರೇಖಾ ಕೋಟೆ,ರಾಮ ಕ್ಷತ್ರಿಯ ಯುವಕ ಸಂಘದ , ಅಧ್ಯಕ್ಷರಾದ ಶ್ರೀ ಸಂದೀಪ್ ರಾವ್, ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸೂರ್ಯ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ರಾಮ ಕ್ಷತ್ರಿಯ ಯುವಕ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಅಮರ್ ಕೋಟೆ ನೆರವೇರಿಸಿದರು. ಕೊನೆಯಲ್ಲಿ, ಶ್ರೀ ರಿತೇಶ್ ಅವರು ಸಮಾರೋಪ ಭಾಷಣ ಮಾಡಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಈ ಕಾರ್ಯಕ್ರಮವು ಸಮಾಜದಲ್ಲಿ ಪರಿಸರ ಪ್ರಜ್ಞೆ ಮತ್ತು ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.
ರಾಮ ಕ್ಷತ್ರಿಯ ಯುವ ವೃಂದದಿಂದ ಕಲ್ಲಬೆಟ್ಟು ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಗಿಡ ವಿತರಣೆ ಯಶಸ್ವಿ
RELATED ARTICLES