ಉಡುಪಿ:: ಉಡುಪಿ ಶ್ರೀ ಕೃಷ್ಣ ಮಠ ಕ್ಕೆ ಭಾರತ ಸರಕಾರದ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನವ ದೆಹಲಿ ಇದರ ಜನರಲ್ ಸೆಕ್ರೆಟರಿ ಟಿ ಕೆ ರಾಮಚಂದ್ರನ್ ಭಾ . ಆ . ಸೇ ಶನಿವಾರ ಶ್ರೀ ಕೃಷ್ಣ ಮಠಕ್ಕೆ ಭೇಟಿ ಶ್ರೀ ದೇವರ ದರ್ಶನ ಪಡೆದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿದರು ಶ್ರೀಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ದಂಪತಿಗಳನ್ನು ಗೌರವಿಸಿದರು. ಬೃಹತ್ ಗೀತೋತ್ಸವದ ಅಂಗವಾಗಿ ಕೋಟಿ ಗೀತಾ ಯಜ್ಞ ದೀಕ್ಷೆ ನೀಡಿ ಅನುಗ್ರಹಿಸಿದರು , ಈ ಸಂದರ್ಭದಲ್ಲಿ ಶ್ರೀಮಠದ ದಿವಾನರಾದ ನಾಗರಾಜಾಚಾರ್ಯ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ , ನ್ಯೂ ಮಂಗಳೂರು ಬಂದರಿನ ಉನ್ನತ ಅಧಿಕಾರಿಗಳು ಉಪಸ್ಥರಿದ್ದರು.